ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆ ಜಿಲ್ಲಾ ಬೆಸ್ತರ ಸಂಘದಿಂದ ಸನ್ಮಾನ

Rashmi Kasaragodu
Updated On : 1 Sept 2013, 10:53 am

ಶಿವಮೊಗ್ಗ: ಜಿಲ್ಲಾ ಬೆಸ್ತರ ಸಂಘ, ಮಾತಾ ಆಮೃತಾನಂದಮಯಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ಗಂಗಾ ಪರಮೇಶ್ವರಿ ಯುವಕರ ಸಂಘ ಹಾಗೂ ತಾಲೂಕು ಗಂಗಾಮತ ಸಮಾಜದ ಸಂಯುಕ್ತ ಆಶ್ರಯದಲ್ಲಿ ಸೆ.2ರಂದು ಮಧ್ಯಾಹ್ನ 1 ಗಂಟೆಗೆ ಹಳೇ ತೀರ್ಥಹಳ್ಳಿ ರಸ್ತೆಯಲ್ಲಿರುವ ಸೀತಮ್ಮ ಅನಂತಯ್ಯ ಸಭಾ ಭವನದಲ್ಲಿ ಜನಪ್ರತಿನಿಧಿಗಳಿಗೆ ಸನ್ಮಾನ ಹಾಗೂ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಲಿದೆ.
ಕಾರ್ಯಕ್ರಮವನ್ನು ಸಚಿವ ಬಾಬುರಾವ್ ಚಿಂಚನಸೂರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜಿಲ್ಲಾ ಬೆಸ್ತರ ಸಂಘದ ಅಧ್ಯಕ್ಷ ಡಿ.ಬಿ.ಕೆಂಚಪ್ಪ ವಹಿಸುವರು.
ಶಾಸಕ ಕೆ.ಬಿ.ಪ್ರಸನ್ನಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಕೆ.ಆರ್. ಧರ್ಮಪ್ಪ, ನಗರಸಭಾ ಸದಸ್ಯರಾದ  ಸುನಿತಾ ಅಣ್ಣಪ್ಪರನ್ನು ಸನ್ಮಾನಿಸಲಾಗುತ್ತದೆ.
ಮುಖ್ಯ ಅತಿಥಿಯಾಗಿಗಿ ಜಿಲ್ಲಾ ಬೆಸ್ತರ ಸಂಘದ ಗೌರವಾಧ್ಯಕ್ಷ ಎ.ತಿಮ್ಮಪ್ಪ, ಜಿಲ್ಲಾ ಮೊಗವೀರ ಸಂಘದ ಅಧ್ಯಕ್ಷ ಯು.ಜೆ. ಮಹಾಬಲ ರಾವ್, ಮಾಜಿ ಜಿಪಂ ಸದಸ್ಯ ಕೆ. ಅರುಣ್ ಪ್ರಸಾದ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಚ್.ಮಂಜಪ್ಪ, ಜಿಲ್ಲಾ ಬೆಸ್ತರ ಸಂಘದ ಕಾರ್ಯಾಧ್ಯಕ್ಷ ಎಸ್.ಸಿ. ಲೋಕೇಶ್, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಸ್.ಸಿ. ಹೇಮಂತರಾಜು, ಮಾತಾ ಅಮೃತಾನಂದಮಯಿ ಸಂಘದ ಅಧ್ಯಕ್ಷೆ ರೂಪಾ ಹೇಮಂತರಾಜು, ಭದ್ರಾವತಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್. ಕೃಷ್ಣಪ್ಪ ಮೊದಲಾದವರು ಆಗಮಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಲಿದ್ದು, ಎಲ್ಲಾ ಸದಸ್ಯರು ಆಗಮಿಸುವಂತೆ ಸಂಘ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement