ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಶುಪಾಲನೆಗೆ ವಿಶೇಷ ಪ್ಯಾಕೇಜ್ ನೀಡಿ

Lingaraj Badiger
Updated On : 2 Dec 2013, 11:36 am

ಹೊಸನಗರ: ಅತಿಯಾದ ಮಳೆ ಸೇರಿದಂತೆ ಅನೇಕ ವೈಪರೀತ್ಯಗಳ ನಡುವೆ ಮಲೆನಾಡಿನಲ್ಲಿ ಪಶುಪಾಲನೆ ಕಷ್ಟವಾಗುತ್ತಿದ್ದು, ಸರ್ಕಾರ ವಿಶೇಷ ಪ್ಯಾಕೇಜ್ ನಿಡುವಂತೆ ರೈತರು ಆಗ್ರಹಿಸಿದರು.
ಜಿಲ್ಲೆಯಿಂದ ದೂರ ಹಾಗೂ ಅತಿ ಹಿಂದುಳಿದ ನಕ್ಸಲ್‌ಪೀಡಿತ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಪಶುಪಾಲನಾ ಇಲಾಖೆ ವತಿಯಿಂದ ತಾಲೂಕಿನ ಮೂಡುಗೊಪ್ಪ, ಕರಿಮನೆ, ನಿಟ್ಟೂರು ಹಾಗೂ ಹೊಸೂರು- ಸಂಪೆಕಟ್ಟೆ ಗ್ರಾಪಂ ವ್ಯಾಪ್ತಿಯ ವಾಟಗೋಡು, ಹುಲ್ಲರಿಕೆ, ಹೆಬ್ಬಿಗೆ, ನಾಗೋಡಿ ಹಾಗೂ ಹೊಸೂರು(ತಗಡ್ಲೆ) ಗ್ರಾಮಗಳಲ್ಲಿ 5 ದಿನಗಳ ಕಾಲ ಜಾನುವಾರುಗಳ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡ ರೈತರು ವಿಶೇಷ ಪ್ಯಾಕೇಜಿಗೆ ಒತ್ತಾಯಿಸಿದರು.
ಹುಚ್ಚು ನಾಯಿ ಲಸಿಕೆ ತುರ್ತಾಗಿ ಮತ್ತು ಉಚಿತನಾಗಿ ನೀಡಬೇಕು. ಸಂಪೇಕಟ್ಟೆ ಮತ್ತು ಖಾಲಿ ಇರುವ ಪಶು ಚಿಕಿತ್ಸಾಲಯಕ್ಕೆ ಕೂಡಲೆ ಕಾಯಂ ಸಿಬ್ಬಂದಿ ನೇಮಕ ಮಾಡಬೇಕು. ಪಶುಪಾಲನೆ ಅಭಿವೃದ್ಧಿ ಮತ್ತು ರೈತರ ಹಿತರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಶಿಬಿರದಲ್ಲಿ ಕೇಳಿ ಬಂತು.
ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಆರ್.ಆರ್. ರವೀಂದ್ರ, ರೈತರು ಸಮಗ್ರ ಕೃಷಿಯತ್ತ ಗಮನ ಹರಿಸಬೇಕು, ಹೈನುಗಾರಿಕೆ, ಕುರಿ- ಕೋಳಿ ಸಾಕಣೆಯಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯ ಎಂದರು.
ಸಿಬ್ಬಂದಿ ಕೊರತೆ: ತಹಸೀಲ್ದಾರ್ ಸಿ.ಎಂ. ಕುಲಕರ್ಣಿ, ಪಶುಪಾಲನಾ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಆದಾಗ್ಯೂ ಕುಗ್ರಾಮಗಳಿಗೆ ಹೋಗಿ ಜಾನುವಾರು ರಕ್ಷಣೆಯಲ್ಲಿ ತೊಡಗಿದ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಿದರು.
ರಿಪ್ಪನ್‌ಪೇಟೆ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಡಾ. ಕೆ.ಎಂ. ನಾಗರಾಜ್ ನೇತೃತ್ವದಲ್ಲಿ ನಡೆದ ಈ ಶಿಬಿರಗಳಲ್ಲಿ ಸುಮಾರು 2000 ಜಾನುವಾರುಗಳಿಗೆ ವಿವಿಧ ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆ, ಜಂತು ನಿವಾರಕ ಹಾಗೂ ಪರೋಪಜೀವಿನಾಶಕ ಔಷಧಿ, ಲವಣ ಮಿಶ್ರಣ ವಿತರಣೆ, ವಿವಿಧ ಜಾನುವಾರು ರೋಗಗಳಿಗೆ ಚಿಕಿತ್ಸೆ, ತಜ್ಞರಿಂದ ಮಾಹಿತಿ ಕಾರ್ಯಾಗಾರ ನಡೆಸಲಾಯಿತು.
ಆಯಾ ಗ್ರಾಮದ ಪ್ರಮುಖರಾದ ಚಂದಯ್ಯ ಜೈನ್, ಸತ್ಯನಾರಾಯಣ ಭಟ್, ಶ್ರೀಧರ ಭಟ್, ವಿಜಯಕುಮಾರ್, ರಾಮಪ್ಪಗೌಡ, ಸುಬ್ರಮಣ್ಯ ಆಚಾರ್, ಶಿವರಾಮಶೆಟ್ಟಿ, ತಗಡ್ಲೆ ಪರಮೇಶ್ವರ, ರಮಾವತಿ, ಮಹಾಬಲ ಭಟ್ಟ, ಮೋಹನಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಎಂ.ಎಸ್. ರಾಮಚಂದ್ರ, ಡಾ. ಜೆ.ಆರ್. ತಿಮ್ಮಪ್ಪ, ಜಾನುವಾರು ಅಧಿಕಾರಿ ಕೆ.ಎನ್. ಕೃಷ್ಣಮೂರ್ತಿ, ಮಂಜಪ್ಪ, ಸುರೇಶ್, ಜಫರುಲ್ಲಾ ಆಲ್ವಿ, ರಾಜ್‌ಅಹ್ಮದ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement