ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸ್ವಾಮೀಜಿಗಳಿಂದ ಸಮಾಜ ಛಿದ್ರ

Mainashree
Updated On : 1 Dec 2013, 9:37 am

ಶಿವಮೊಗ್ಗ: ಪ್ರಸ್ತುತ ಕೆಲವು ಸ್ವಾಮೀಜಿಗಳು ಜಾತಿ, ಉಪಜಾತಿಗಳನ್ನು ಒಳಗೊಳಗೆ ಎತ್ತಿಕಟ್ಟಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಂಥ ಸ್ವಾಮೀಜಿಗಳನ್ನು ಜನರು ತಿರಸ್ಕರಿಸಬೇಕೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. ಭಾನುವಾರ ಆಯೋಜಿಸಿದ್ದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕನಕದಾಸರು ಜಾತಿ ಮೀರಿದ ಸಮಾಜ ನಿರ್ಮಾಣ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ, ಇಂದು ಅದೇ ಸಮಾಜದಲ್ಲಿ ಸರ್ವಸಂಗ ಪರಿತ್ಯಾಗ ಮಾಡಿದ ಕೆಲವು ಸ್ವಾಮೀಜಿಗಳು ಹಾಗೂ ಸಾಧುಸಂತರೇ ಪೈಪೋಟಿಗೆ ಬಿದ್ದಂತೆ ಒಳಗೊಳಗೆ ಜಾತಿ, ಉಪಜಾತಿಗಳಿಗೆ ಬೆಂಬಲಿಸತೊಡಗಿದ್ದಾರೆ. ಇದರಿಂದ ಸಮಾಜದಲ್ಲಿ ಜಾತಿ, ಉಪಜಾತಿಗಳ ನಡುವೆ ಭೇದಭಾವ ಹೆಚ್ಚಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement