ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಯತಪ್ಪಿ ಬಿದ್ದು ಬೈಕ್ ಸವಾರ ಸಾವು

Lingaraj Badiger
Updated On : 3 Dec 2013, 10:40 am

ಶಿವಮೊಗ್ಗ: ಬೈಕ್ ಆಯತಪ್ಪಿ ಬಿದ್ದ ಪರಿಣಾಮ ಚಾಲಕನೊಬ್ಬ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಗರದ ಹೊರವಲಯ ಬಿ.ಎಚ್.ರಸ್ತೆಯ ಮಲ್ನಾಡ್ ಆಸ್ಪತ್ರೆ ಬಳಿ ನಡೆದಿದೆ. ಸೂಳೇಬೈಲು ಗ್ರಾಮದ ನಿವಾಸಿ ಗೋವಿಂದ ಮೃತಪಟ್ಟ ಬೈಕ್ ಚಾಲಕ. ಈತ ಪಲ್ಸರ್‌ಬೈಕ್ ಚಾಲನೆ ಮಾಡಿಕೊಂಡು ತೆರಳುತ್ತಿದ್ದ ವೇಳೆ ಚಾಲನೆಯ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಸಿಲಿಂಡರ್ ಕಳವು
ಶಿವಮೊಗ್ಗ: ಅಂಗಡಿಯೊಂದರಲ್ಲಿದ್ದ ಎರಡು ಸಿಲಿಂಡರ್‌ಗಳನ್ನು ಕಳ್ಳರು ಅಪಹರಿಸಿ ಪರಾರಿಯಾಗಿರುವ ಘಟನೆ ನಗರದ ವಿನೋಬನಗರದ ಪೊಲೀಸ್ ಚೌಕಿ ವೃತ್ತದ ಬಳಿ ನಡೆದಿದೆ. ಸುಬ್ರಹ್ಮಣ್ಯ ಎಂಬುವರ ಅಂಗಡಿಯಲ್ಲಿ ಘಟನೆ ನಡೆದಿದೆ. ಕಳುವಾದ ಸಿಲಿಂಡರ್‌ಗಳು ಎಚ್.ಪಿ. ಕಂಪನಿಗೆ ಸೇರಿದ್ದಾಗಿದೆ. ಇವುಗಳ ಮೌಲ್ಯ ಸುಮಾರು 1,600 ಎಂದು ಅಂದಾಜಿಸಲಾಗಿದೆ. ಪ್ರಕರಣ ವಿನೋಬನಗರ ಠಾಣೆಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement