ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿಜೃಂಭಣೆಯ ದೀಪೋತ್ಸವ ಆಚರಣೆ

Lingaraj Badiger
Updated On : 3 Dec 2013, 10:33 am

ಕ.ಪ್ರ.ವಾರ್ತೆ  ಶಿಕಾರಿಪುರ  ಡಿ.2 ಕಾರ್ತಿಕ ಕಡೇ ಸೋಮವಾರದ ಅಂಗವಾಗಿ ಶಿಕಾರಿಪುರದ ಪ್ರಸಿದ್ಧ ಹುಚ್ಚೂರಾಯಸ್ವಾಮಿ ದೇವಸ್ಥಾನದಲ್ಲಿ ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಬಹು ವಿಜೃಂಭಣೆಯಿಂದ ಜರುಗಿತು.
ಕಾರ್ತಿಕ ಮಾಸದಲ್ಲಿ ದೀಪಾಲಂಕಾರ ಬಹು ವಿಶೇಷವಾಗಿದ್ದು, ಈ ದಿಸೆಯಲ್ಲಿ ಶಿಕಾರಿಪುರದ ಪ್ರಸಿದ್ಧ ಹಾಗೂ ಐತಿಹಾಸಿಕ ಹುಚ್ಚೂರಾಯಸ್ವಾಮಿ ದೇವಸ್ಥಾನದಲ್ಲಿ ಅಮಾವಾಸೆಯ ಸೋಮವಾರ ಸಂಜೆ ಲಕ್ಷಾಂತರ ದೀಪಗಳನ್ನು ದೇವಾಲಯದ ಆವರಣದಲ್ಲಿ ಭಕ್ತರು ಹಚ್ಚುವ ಮೂಲಕ ಸಂಪ್ರದಾಯ ಆಚರಿಸಿದರು.
ವಿಧ್ಯುಕ್ತ ಚಾಲನೆ: ಮುಜರಾಯಿ ಇಲಾಖೆ ಸುಪರ್ದಿಯಲ್ಲಿನ ದೇವಾಲಯದಲ್ಲಿ ಕಾರ್ತಿಕ ಮಾಸದ ದೀಪಾಲಂಕಾರಕ್ಕೆ ತಹಸೀಲ್ದಾರ್ ಧರ್ಮೋಜಿರಾವ್ ದೀಪ ಬೆಳಗಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದ ದೇವಾಲಯ ಸಂಜೆ ವೇಳೆಗೆ ದೀಪಾಲಂಕಾರದಿಂದ ಸಾವಿರಾರು  ಭಕ್ತರನ್ನು ಆಕರ್ಷಿಸಿತು.
ಕಾರ್ಯಕ್ರಮದ ಅಂಗವಾಗಿ ಹುಚ್ಚೂರಾಯ ಸ್ವಾಮಿಯ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಯಲ್ಲಿ ನೆರವೇರಿತು. ನಂತರದಲ್ಲಿ ದೇವಸ್ಥಾನದ ಬಳಿಯ ಗರುಡಗಂಬದ ಸಮೀಪ ತುಪ್ಪದಲ್ಲಿ ನೆನೆಸಿದ ವಸ್ತ್ರವನ್ನು ದಹಿಸಲಾಯಿತು. ಇದರ ಪ್ರಸಾದಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮುಗಿ ಬಿದ್ದ ದೃಶ್ಯ ಸಾಮಾನ್ಯವಾಗಿತ್ತು.
ದೀಪೋತ್ಸವದ ನಂತರದಲ್ಲಿ ಆಗಮಿಸಿದ್ದ ಭಕ್ತರಿಗೆ ಚೌಡೇಶ್ವರಿ ಸಂಘದ ವತಿಯಿಂದ ಪ್ರಸಾದ ವಿತರಣೆ ನಡೆಯಿತು.
ಸಂಘದ ನೇತೃತ್ವ ವಹಿಸಿದ್ದ ಕಾರ್ಯದರ್ಶಿ ಹುಚ್ಚಪ್ಪ, ಸದಸ್ಯ ಶಿವಶಂಕರಪ್ಪ, ಮಂಜಪ್ಪ ತಂಡದ ಕಾರ್ಯ ಭಕ್ತರ ಪ್ರಶಂಸೆಗೆ ಪಾತ್ರವಾಯಿತು. ಧಾರ್ಮಿಕ ಕಾರ್ಯದ ಸಫಲತೆಗೆ ಚೌಡೇಶ್ವರಿ ಸಂಘದ ಅಧ್ಯಕ್ಷ ಸುಕೇಂದ್ರಪ್ಪ, ಪುರಸಬಾ ಸದಸ್ಯ ವಸಂತಗೌಡ, ಗುರುಮೂರ್ತಿ, ಗಜೇಂದ್ರ ಮೊದಲಾದವರು ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement