ವಿದ್ಯುತ್ ವ್ಯತ್ಯಯ
ಹೊಸನಗರ: ಡಿ. 3ರಂದು ದುರಸ್ತಿಯ ಕಾರಣ ಹೊಸನಗರ ಪಟ್ಟಣ ವ್ಯಾಪ್ತಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಮೆಸ್ಕಾಂ ಎಇಇ ಚಂದ್ರಶೇಖರ್, ಹೊಸನಗರ ಉಪವಿಭಾಗದಲ್ಲಿ ಹೊಸ ಪರಿವರ್ತಕ ಅಳವಡಿಸುವ ಕಾಮಗಾರಿ ನಡೆಸಲಿದ್ದು, ಹೊಸನಗರ ಟೌನ್ ವ್ಯಾಪ್ತಿ ಮತ್ತು ಎಫ್- 4 ಕಾಳಿಕಾಪುರ ಫೀಡರ್ ವ್ಯಾಪ್ತಿಗೆ ಬರುವ ಕಾಳಿಕಾಪುರ, ಮಾರುತಿಪುರ, ಬಟ್ಟೆಮಲ್ಲಪ್ಪ, ಹರಿದ್ರಾವತಿ ಮತ್ತು ಹರತಾಳು ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದಿದ್ದಾರೆ.