ಶಿರಾಳಕೊಪ್ಪ; ಉಚಿತ ನೇತ್ರ ತಪಾಸಣೆ, ಚಿಕಿತ್ಸಾ ಶಿಬಿರ
ಕ.ಪ್ರ. ವಾರ್ತೆ, ಶಿರಾಳಕೊಪ್ಪ, ಡಿ.2
ಆರೋಗ್ಯ ಪರೀಕ್ಷೆ ಮೊದಲು ತಮಗೇನಾದರೂ ಕಾಯಿಲೆಗಳಿದ್ದರೆ ಆ ಸಂಗತಿಯನ್ನು ವೈದ್ಯರ ಬಳಿ ತಿಳಿಸಬೇಕು ಎಂದು ನೇತ್ರ ಚಿಕಿತ್ಸೆಗೆ ಬಂದಂತಹ ಗ್ರಾಮಸ್ಥರು, ನಾಗರಿಕರು ಡಾ. ಗಿರಿರಾಜ್ ಹೇಳಿದರು.
ಶಿರಾಳಕೊಪ್ಪ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶಾಂತಮ್ಮ ಅವರ ತಂದೆ ತಾಯಿ ಸ್ಮರಣಾರ್ಥ ಶಂಕರ್ ಕಣ್ಣಿನ ಆಸ್ಪತ್ರೆ, ಶಿರಾಳಕೊಪ್ಪ ಸಮುದಾಯ ಆಸ್ಪತ್ರೆ ಹಾಗೂ ಸರ್ಕಾರದ ವಿವಿಧ ಇಲಾಖೆ ಸಹಕಾರದೊಂದಿಗೆ ನಡೆದ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸುಸಜ್ಜಿತ ವ್ಯವಸ್ಥೆ: ಹದಿನೈದು, ಇಪ್ಪತ್ತು ವರ್ಷಗಳ ಹಿಂದೆ ಇರುವ ವ್ಯವಸ್ಥೆಯಲ್ಲಿ ಹಾಗೂ ಕಟ್ಟಡದಲ್ಲಿ ನೇತ್ರ ಚಿಕಿತ್ಸೆ ನಡೆಸಲಾಗುತ್ತಿತ್ತು. ಆಗ ಹಲವಾರು ಸಮಸ್ಯೆ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಲು ಭಯಪಡುವಂತಾಗಿತ್ತು ಎಂದರು.
ಶಂಕರ ನೇತ್ರಾಲಯದ ವೈದ್ಯ ಹರೀಶ್ ಪ್ರಸಾದ್ ಮಾತನಾಡಿದರು. ನಂತರ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶಾಂತಮ್ಮ ಪತ್ರಿಕೆಯೊಂದಿಗೆ ಮಾತನಾಡಿದರು. ಶಂಕರ ನೇತ್ರಾಲಯದ ವೈದ್ಯ ಪವಾರ್, ಶಿರಾಳಕೊಪ್ಪ ಸಮುದಾಯ ಆಸ್ಪತ್ರೆಯ ವೈದ್ಯ ಸಂಜೀವ ಪವಾರ್ ಸಿಬ್ಬಂದಿ ಕೇದಾರನಾಥ ಇದ್ದರು. ಶಿಬಿರರದಲ್ಲಿ ಎರಡನೂರಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಆರೋಗ್ಯ ಇಲಾಖೆಯ ಕು. ರಾಜೇಶ್ವರಿ ಪ್ರಾರ್ಥಿಸಿದರು,ಶಬ್ಬೀರ ಖಾನ್ ಸ್ವಾಗತಿಸಿದರು. ಹೂಗಾರ್ ವಂದಿಸಿದರು.