ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸುಜ್ಞಾನದ ಬೆಳಕು ಇಂದು ಸಮಾರೋಪ

Lingaraj Badiger
Updated On : 4 Dec 2013, 10:47 am

ಶಿರಾಳಕೊಪ್ಪ: ಕಾರ್ತಿಕ ಮಾಸದಲ್ಲಿ ಸುಜ್ಞಾನದ ಬೆಳಕು ಎಂಬ ಕಾರ್ಯಕ್ರಮವನ್ನು ಕಳೆದ ಒಂದು ತಿಂಗಳಿನಿಂದ ತಾಲೂಕಿನಾದ್ಯಾಂತ ಮಾಡಲಾಗಿದ್ದು, ಈ ಕಾರ್ಯಕ್ರಮದ ಸಮಾರೋಪವನ್ನು ಡಿ. 4 ಬುಧವಾರದಂದು ನಡೆಯಲಿದೆ ಎಂದು ಶಿಕಾರಿಪುರ ಮುರುಘರಾಜೇಂದ್ರ ವಿರಕ್ತ ಮಠದ ಚೆನ್ನಬಸವ ಶ್ರೀ ತಿಳಿಸಿದ್ದಾರೆ.       ಶಿರಾಳಕೊಪ್ಪ ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಅಜ್ಞಾನದ ಬೆಳಕನ್ನು ದೀಪ ಬೆಳಗಿಸುವ ಸುಜ್ಞಾನದ ಬೆಳಕು ಎಂಬ ಕಾರ್ಯಕ್ರಮ ಆಚರಣೆ ಮುಖಾಂತರ ಶಿರಾಳಕೊಪ್ಪ ಹತ್ತಿರದ ಅಲ್ಲಮ ಪ್ರಭುವಿಗೆ ದೀಕ್ಷೆ ಕೊಟ್ಟ ಪವಿತ್ರ ಸ್ಥಳವಾದ ಮಾಳಗೊಂಡನಕೊಪ್ಪದಲ್ಲಿ ನಡೆಸಲಾಗುವದು ಎಂದಿದ್ದಾರೆ.
ದಿ.4ರಂದು ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಡಾ.ಶಿವಮೂರ್ತಿ ಮುರಘ ರಾಜೇಂದ್ರ ಶರಣರು ಭಾಗವಹಿಸಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿರುವರು. ಕಾರ್ಯಕ್ರಮದಲ್ಲಿ ಶಿವಯೋಗವುಂದಿರದ ರೇವಣಸಿದ್ದ ಶ್ರೀ, ತೊಗರ್ಸಿ ಮಹಂತ ದೇಶಿಕೇಂದ್ರ ಶ್ರೀ, ಹಿರೇಮಾಗಡಿ ಶಿವಮೂರ್ತಿ ಮುರಘರಾಜೇಂದ್ರ ಶ್ರೀ, ಶಿರಾಳಕೊಪ್ಪ ವಿರಕ್ತ ಮಠದ ಸಿದ್ದೇಶ್ವರ ಶ್ರೀ, ಅಕ್ಕೀಆಲೂರಿನ ಶಿವಬಸವ ಸ್ವಾಮಿಗಳು, ಕೋಣಂದರು ಪಂಡಿತಾರಾದ್ಯ ಶ್ರೀ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯ ದಾನಿ ರುದ್ರಪ್ಪ, ಶಿಕಾರಿಪುರದ ಕುಮಾರ್, ಸುಭಾಶ್ಚಂದ್ರ, ಸ್ಥಾನಿಕ್, ಶಿರಾಳಕೊಪ್ಪ ಪಪಂ ಮಾಜಿ ಅಧ್ಯಕ್ಷ ಲೋಕೇಶ್, ಮಲ್ಲಪ್ಪ ಬಳ್ಳಿಗಾವಿ, ಚಂದ್ರಯ್ಯ, ವೀರಣ್ಣ, ಚೆನ್ನವೀರಪ್ಪ ಹಾಗು ಹಲವಾರು ಪ್ರಮುಖರು ಭಾಗವಹಿಸಿದ್ದರು.
--
ನಮೋ ಬ್ರಿಗೇಡ್ ಸಭೆ
ಸಾಗರ: ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕು ಎಂಬ ಏಕಮಾತ್ರ ಉದ್ದೇಶದಿಂದ ಹುಟ್ಟಿಕೊಂಡಿರುವ ನಮೋ ಬ್ರಿಗೇಡ್ ಸಮಾನ ಮನಸ್ಕರ ಸಂಘಟನೆ ತಾಲೂಕು ಘಟಕದ ಉದ್ಘಾಟನೆ ಡಿ.5 ರಂದು ನಡೆಯಲಿದೆ. ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘಟನೆ ಅಧ್ಯಕ್ಷ ಕೆ.ಎಲ್. ಭೋಜರಾಜ್, ಅಂದು ಸಂಜೆ 6ಗಂಟೆಗೆ ಪಟ್ಟಣದ ಗಾಂಧಿ ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ಸಮಾರಂಭಕ್ಕೆ ಮೊದಲು ಸಂಜೆ 4ಗಂಟೆಗೆ ಮಹಾಗಣಪತಿ ದೇವಸ್ಥಾನದಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಘಟನೆಯ ಸಲಹೆಗಾರ ರಾಜೇಂದ್ರ ಪೈ, ಮಹೇಶ್, ಪಾಂಡುರಂಗ, ಅನಿಲ್, ಸೂರ್ಯ ನಾರಾಯಣ, ದೀಪು ಸಾಗರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement