ಕಡಿಮೆ ಬಡ್ಡಿ ದರದಲ್ಲಿ ಕೆನರಾ ಬ್ಯಾಂಕ್ ಸಾಲ
ಶಿವಮೊಗ್ಗ: ಕೆನರಾ ಬ್ಯಾಂಕ್ ಗೃಹ ಸಾಲಕ್ಕೆ ಅತ್ಯಂತ ಕಡಿಮೆ ಸಮಾನಾಂತರ ಮಾಸಿಕ ಕಂತನ್ನು ಪ್ರಚುರಪಡಿಸುತ್ತಿದೆ ಎಂದು ಬ್ಯಾಂಕ್ ವೃತ್ತ ಕಚೇರಿಯ ಉಪ ಮಹಾ ಪ್ರಬಂಧಕ ಎಂ.ಎಂ. ಚಿನಿವಾರ್ ತಿಳಿಸಿದ್ದಾರೆ.
ಗೃಹ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುವ ಉದ್ದೇಶದಿಂದ ಎಲ್ಲಾ ಸಾರ್ವಜನಿಕ ಬ್ಯಾಂಕ್ಗಳು ಸಾಧ್ಯವಾದಷ್ಟು ಮಟ್ಟಿಗೆ ಗೃಹಸಾಲದ ಮೇಲಿನ ಸಾಲಕ್ಕೆ ಅತ್ಯಂತ ಕಡಿಮೆ ಬಡ್ಡಿ ದರ ನಿಗದಿಪಡಿಸಿವೆ. ಕೆನರಾ ಬ್ಯಾಂಕ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಬ್ಯಾಂಕಿಂಗ್ ವಲಯದಲ್ಲಿಯೇ ಅತ್ಯಂತ ಕಡಿಮೆ ದರ ನಿಗದಿಪಡಿಸಿದೆ ಎಂದವರು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಭಾರತೀಯ ಸ್ಟೇಟ್ ಬ್ಯಾಂಕ್ ಶೇ. 10.30ರಿಂದ 10.50, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡ ಶೇ. 10.25ರಿಂದ 10.50, ಬ್ಯಾಂಕ್ ಆಫ್ ಇಂಡಿಯಾ ಶೇ. 10.25ರಿಂದ 10.30, ಐಸಿಐಸಿಐ ಬ್ಯಾಂಕ್ ಶೇ. 10.40ರಿಂದ 11.20, ಎಚ್ಡಿಎಫ್ಸಿ ಬ್ಯಾಂಕ್ ಶೇ. 10.25ರಿಂದ 10.65ರಷ್ಟು ಬಡ್ಡಿ ವಿಧಿಸುತ್ತಿದ್ದರೆ ಕೆನರಾ ಬ್ಯಾಂಕ್ ಶೇ. 9.95ರಿಂದ ಶೇ.10.20ರಷ್ಟು ಬಡ್ಡಿ ನಿಗದಿಪಡಿಸಿದೆ. ಕೆನರಾ ಬ್ಯಾಂಕ್ ಎಲ್ಲಾ ವರ್ಗದ ಗ್ರಾಹಕರಿಗೂ (ಕೃಷಿಕರು, ಅನಿವಾಸಿ ಭಾರತೀಯರಿಗೆ ಇತ್ಯಾದಿ) ಸೇರಿದಂತೆ ಗೃಹ ಸಾಲ ಯೋಜನೆಗಳನ್ನು ಯೋಜಿಸಿದೆ. ದೇಶದ ಜನಸಂಖ್ಯೆಯ ಶೇ. 60ರಷ್ಟು ಹೊಂದಿರುವ ಕೃಷಿಕರಿಗೆ ಗೃಹ ಸಾಲ ಯೋಜನೆ ರೂಪಿಸಿರುವ ಏಕೈಕ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಕೆನರಾ ಬ್ಯಾಂಕ್ಗೆ ಸಲ್ಲುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಅತಿ ಹೆಚ್ಚಿನ ಆದಾಯ ಹೊಂದಿರುವ ಗ್ರಾಹಕರಿಗೆ ಒಂದು ಕೋಟಿಗಿಂತ ಹೆಚ್ಚಿನ ಗೃಹ ಸಾಲ ಅತಿ ಕಡಿಮೆ ಬಡ್ಡಿ ದರದಲ್ಲಿ (ಶೇ. 10.05) ನೀಡುವ ಯೋಜನೆ ಹೊಂದಿದೆ. ಇದು ಇಡೀ ಬ್ಯಾಂಕಿಂಗ್ ವಲಯದಲ್ಲಿ ಅತ್ಯಂತ ಕಡಿಮೆ ಬಡ್ಡಿ ದರವಾಗಿರುತ್ತದೆ.
ವಾಹನ ಸಾಲ ನೀಡಿಕೆಯಲ್ಲೂ ಒಳ್ಳೆಯ ಯೋಜನೆ ಹಮ್ಮಿಕೊಂಡಿದ್ದು, ಡಿಸೆಂಬರ್ 2013ರ ವರೆಗೆ ಶೇ.10.45 ಬಡ್ಡಿ ದರದಲ್ಲಿ ಯಾವುದೇ ಪರಿಷ್ಕರಣ ಶುಲ್ಕವಿಲ್ಲದೆ ವಾಹನ ದರದ ಮೇಲೆ ಶೇ. 90ರವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದವರು ಹೇಳಿದ್ದಾರೆ.