ನೀರು ಸರಬರಾಜಲ್ಲಿ ಇಂದು ವ್ಯತ್ಯಯ
ಶಿವಮೊಗ್ಗ: ನಗರದ ಗಾಜನೂರು ಪಂಪ್ ಹೌಸ್ನಲ್ಲಿ ಡಿ 4ರಂದು ಮೆಸ್ಕಾಂ ವತಿಯಿಂದ ವಿದ್ಯುತ್ ಮಾರ್ಗಗಳ ದುರಸ್ತಿಗಾಗಿ ವಿದ್ಯುತ್ ಪೂರೈಕೆಯನ್ನು ನೀರು ಸರಬರಾಜು ಕೇಂದ್ರಕ್ಕೆ ನಿಲುಗಡೆ ಮಾಡುವುದರಿಂದ ಡಿ. 4 ಮತ್ತು 5ರಂದು ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಸಭಾ ಪೌರಾಯುಕ್ತರು ತಿಳಿಸಿದ್ದಾರೆ.
ಕಾಣೆಯಾದವರ ಪತ್ತೆಗೆ ನೆರವು ನೀಡಿ
ಶಿವಮೊಗ್ಗ: ಕೃಷ್ಣೇಗೌಡ ಬಿನ್ ಕರಿಗೌಡ ಇವರು ಅಕ್ಟೋಬರ್ 22ರಂದು ದುರ್ಗಿಗುಡಿಯ ಮಲ್ನಾಡ್ ಡಯಾಗೋಸ್ಟಿಕ್ ಕೇಂದ್ರದಿಂದ ಕಾಣೆಯಾಗಿದ್ದಾರೆ. ಮಾನಸಿಕ ಅಸ್ವಸ್ಥರಾಗಿರುವ ಇವರು 55 ವರ್ಷ ವಯಸ್ಸಿನವರಾಗಿದ್ದು, 5.5 ಅಡಿ ಎತ್ತರ, ಸಾಧಾರಣ ಕಪ್ಪು ಬಣ್ಣ, ಅರೆನೆರೆ ಕೂದಲು ಹೊಂದಿರುವ ಇವರು ಕನ್ನಡ ಬಲ್ಲವರಾಗಿದ್ದಾರೆ. ಕಾಣೆಯಾದ ದಿನದಂದು ಗುಲಾಬಿ ಬಣ್ಣದ ಅಂಗಿ ಮತ್ತು ಬಿಳಿ ಪಂಚೆ ಧರಿಸಿದ್ದಾರೆ. ಇವರ ಸುಳಿವು ಸಿಕ್ಕಲ್ಲಿ ಸಾರ್ವಜನಿಕರು ಜಯನಗರ ಪೊಲೀಸ್ ಠಾಣೆ, ಸಿಪಿಐ ಕೋಟೆ ವೃತ್ತ ಅಥವಾ ಜಿಲ್ಲಾ ನಿಸ್ತಂತು ಕೇಂದ್ರಕ್ಕೆ ಮಾಹಿತಿ ನೀಡುವಂತೆ ಹಾಗೂ ಎಸ್ಪಿ-ಶಿವಮೊಗ್ಗ ದೂ.- 08182-261400, ಜಿಲ್ಲಾ ಕಂಟ್ರೋಲ್ ರೂಂ ದೂ. 08182- 261413 ಸಂಪರ್ಕಿಸುವಂತೆ ಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.