ಪ್ರತಿಭಾ ಕಾರಂಜಿ ಕಾರ್ಯಕ್ರಮ
ಶಿರಾಳಕೊಪ್ಪ: ಮಕ್ಕಳ ಪ್ರತಿಭೆ ವಿಕಾಸಗೊಳ್ಳಲಿ ಎಂದು ಸರ್ಕಾರ ಹಲವು ಯೋಜನೆ, ಸವಲತ್ತು ಜಾರಿಗೆ ತಂದಿದ್ದು, ಆ ಯೋಜನೆಗಳ ಸದುಪಯೋಗ ವಾಗಬೇಕಿದೆ ಎಂದು ಜಿಪಂ ಸದಸ್ಯ ರುದ್ರಪ್ಪ ದಾನೇರ್ ಹೇಳಿದರು. ಶಿರಾಳಕೊಪ್ಪ ಕ್ಲಸ್ಟರ್ ಆಶ್ರಯದಲ್ಲಿ ಇಲ್ಲಿಯ ಹುಚ್ಚುರಾಯ ಸ್ವಾಮಿ ಶಾಲೆಯ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಲಸ್ಟರ್ ಅಧಿಕಾರಿ ನಾಗೇಂದ್ರಪ್ಪ ರಾಗೇರ್, ಶಿಕ್ಷಣ ಸಂಯೋಜಕ ಮಂಜುನಾಥ ಮಾತನಾಡಿದರು. ಅಧ್ಯಕ್ಷತೆಯನ್ನು ಹುಚ್ಚರಾಯ ಸ್ವಾಮಿ ಶಾಲೆ ಸಮಿತಿ ಅಧ್ಯಕ್ಷ ಹನುಮಂತಪ್ಪ ವಹಿಸಿದ್ದರು. ನಾಗರಾಜ್, ಚಿನ್ನಪ್ಪ ಓಬಳೇರ್, ಷಣ್ಮುಖಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಒಟ್ಟು 17 ಶಾಲೆಯ ಮಕ್ಕಳು ಭಾಗವಹಿಸಿದ್ದರು. ಹುಚ್ಚರಾಯ ಸ್ವಾಮಿ ಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ಸ್ವಾಗತಿಸಿದರು. ಅಶೋಕ ವಂದಿಸಿದರು.