ಮಹೇಶ್ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ
ಶಿವಮೊಗ್ಗ: ಇಲ್ಲಿನ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 24ನೇ ವಾರ್ಡ್ನ ಜೆಡಿಎಸ್ ಸದಸ್ಯ ಎಸ್.ಎನ್. ಮಹೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರಸಭೆ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಖುರ್ಷಿದಾ ಬಾನು ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು. ಈಗ ಜೆಡಿಎಸ್ ಪಕ್ಷಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲಾಗಿದೆ.
ಈ ಸಮಿತಿಗೆ ಕಾಂಗ್ರೆಸ್ ನ ಎಸ್.ಕೆ. ಮರಿಯಪ್ಪ, ವಿಶ್ವನಾಥ್ ಕಾಶಿ, ಸುನೀತಾ ಯೋಗೀಶ್ ಗೌಡ, ಸೈಯದ್ ಮಜರ್ ಜಾವೀದ್, ಬಿಜೆಪಿಯ ಎಸ್. ರಮೇಶ್, ಸುನೀತಾ ಅಣ್ಣಪ್ಪ, ಜೆಡಿಎಸ್ನ ನಾಗರಾಜ್ ಕಂಕಾರಿ, ಏಳುಮಲೆ (ಕೇಬಲ್ ಬಾಬು), ಎಸ್ಡಿಪಿಐ ಪಕ್ಷದ ತರನ್ನಮ್ ಬಾನು, ಪಕ್ಷೇತರ ಸದಸ್ಯ ನರಸಿಂಹಮೂರ್ತಿ ಅವರು ಆಯ್ಕೆಯಾಗಿದ್ದಾರೆ.
ಆಯ್ಕೆ ಸಂದರ್ಭದಲ್ಲಿ ಹಾಜರಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಅವರು ಮಹೇಶ್ ಅವರಿಗೆ ಈ ಸಂದರ್ಭದಲ್ಲಿ ಅಭಿನಂದಿಸಿದರು.
--
8ರಂದು 13 ಕೇಂದ್ರಗಳಲ್ಲಿ ಕೆ- ಸೆಟ್ ಪರೀಕ್ಷೆ
ಶಿವಮೊಗ್ಗ: ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯು ಡಿ. 8ರಂದು ನಗರದ 13 ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಈಗಾಗಲೇ ಕೆ- ಸೆಟ್ (ಡಿಡಿಠ್ಞಡಜಡಿ-ಟಣಡ್ಟ್ಠಜ.ಛ್ಛ.್ಝಟಿ) ಅಂತರ್ಜಾಲದಲ್ಲಿ ಅಭ್ಯರ್ಥಿಗಳ ಸೂಚನೆಗಳನ್ನು ಪ್ರಕಟಿಸಲಾಗಿದೆ.
ಎಲ್ಲಾ ಅಭ್ಯರ್ಥಿಗಳು ಸೂಚನೆಯನ್ನು ಕಡ್ಡಾಯವಾಗಿ ಗಮನಿಸಬೇಕು. ಅಭ್ಯರ್ಥಿಗಳ ಪರೀಕ್ಷಾ ಕೇಂದ್ರವನ್ನು ಈಗಾಗಲೇ ಕೆ-ಸೆಟ್ (ಡಿಡಿಠ್ಞಡಜಡಿ.್ಡಟ್ಝಿ-ಟಣಡ್ಟ್ಠಜ.ಛ್ಛ.್ಝಟಿ) ಹಾಗೂ ಕುವೆಂಪು ವಿಶ್ವವಿದ್ಯಾಲಯ(ಡಿಡಿಠಢಿಢಿಢಿ.್ಞ್ಡಢಜಟಠ್ಡ.ಛ್ಛ.್ಝಟಿ) ಅಂತರ್ಜಾಲದಲ್ಲಿ ಪ್ರಕಟಿಸಿದ್ದು, ಅಲ್ಲಿ ತಮ್ಮ ಪರೀಕ್ಷಾ ಕೇಂದ್ರ ನೋಡಿಕೊಳ್ಳತಕ್ಕದ್ದು.
ಈಗಾಗಲೇ ತಿಳಿಸಿರುವಂತೆ ಅಭ್ಯರ್ಥಿಗಳ ಬಳಿ ಇರುವ ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗತಕ್ಕದ್ದು. ಯಾವುದೇ ಸಂದರ್ಭದಲ್ಲಿ ಅಭ್ಯರ್ಥಿಯು ಪ್ರವೇಶ ಪತ್ರವಿಲ್ಲದೆ ಬಂದರೆ ಅಂತಹ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ.
ಪ್ರವೇಶ ಪತ್ರವಿಲ್ಲದ ಅಭ್ಯರ್ಥಿಗಳು ನೋಡಲ್ ಕೇಂದ್ರದ ಕೋರಿಕೆ ಪತ್ರದ ಜೊತೆಗೆ ದಾಖಲಾತಿಗಳನ್ನು ಪರೀಶೀಲನೆಗಾಗಿ ಸಲ್ಲಿಸಿ ಪ್ರವೇಶ ಪತ್ರವನ್ನು ಡಿ. 6ರೊಳಗೆ ಪಡೆದುಕೊಳ್ಳಬೇಕಾಗಿ ತಿಳಿಸಲಾಗಿದೆ.