ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಉಳಿಸಿದ ಹಣ ಸಂಕಷ್ಟಕ್ಕೆ ನೆರವು'

Lingaraj Badiger
Updated On : 6 Dec 2013, 11:37 am

ಕ.ಪ್ರ. ವಾರ್ತೆ, ಶಿರಾಳಕೊಪ್ಪ, ಡಿ.5
ನಾವು ಪ್ರತಿದಿನ ಕುಟುಂಬದ ನಿರ್ವಹಣೆಗೆಂದು, ಹಾಗೆಯೇ ಖರ್ಚು ಮಾಡುವಾಗ ಆ ಹಣದಲ್ಲಿ ಕನಿಷ್ಠ ಹತ್ತು ಭಾಗವನ್ನಾದರೂ ಉಳಿಸಿ ಖರ್ಚು ಮಾಡಿದಾಗ ಉಳಿಸಿದ ಹಣ ನಮ್ಮ ಸಂಕಷ್ಟಕ್ಕೆ ನೆರವಾಗುತ್ತದೆ ಎಂದು ಪಪಂ ಮುಖ್ಯಾಧಿಕಾರಿ ರಾಜ್‌ಕುಮಾರ್ ಕರೆ ನೀಡಿದರು.
ಪಟ್ಟಣದ ಗುರು ಭವನದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಲಯ ಮಟ್ಟದ ಒಕ್ಕೂಟಗಳ ಸಂಘಟನೆಯಲ್ಲಿ ಇರುವಂತಹ ಪದಾಧಿಕಾರಿಗಳು ಸಂಘಟನೆ, ನಿರ್ವಹಣೆ ಹಾಗೂ ಕಾರ್ಯನಿರ್ವಹಿಸುವ ಬಗ್ಗೆ ಮಾಹಿತಿ ನೀಡುವ ಶಿಬಿರದಲ್ಲಿ ಮಾತನಾಡಿದರು.
ಭಾಗವಹಿಸಿದ ಕಾರ್ಯಕರ್ತೆಯರಿಗೆ ಕೆಲವು ಆಟಗಳ ಮುಖಾಂತರ ಇನ್ನು ಕೆಲವು ಉದಾಹರಣೆ ಮುಖಾಂತರ ತರಬೇತಿ ನೀಡಲಾಯಿತು.
ಕಾರ್ಯಕ್ರಮವನ್ನು ಮಾಜಿ ಪುರಸಭೆ ಸದಸ್ಯ ಐ.ಎಂ. ಶಿವಾನಂದಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಯೋಜನಾಧಿಕಾರಿ ಸುರೇಶ್ ಇತರರು ಇದ್ದು ತರಬೇತು ನೀಡಿದರು. ಸೂಪರ್‌ವೈಸರ್ ಚಾಂದಿ, ಸೌಂದರ್ಯ ಹಾಗೂ ಸೇವಾನಿರತ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement