ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಿಮ್ಮನೆ ಹೇಳಿಕೆಗೆ ಸಿಐಟಿಯು ಖಂಡನೆ

Lingaraj Badiger
Updated On : 6 Dec 2013, 11:38 am

ಭದ್ರಾವತಿ: ಶಾಲೆಗಳಲ್ಲಿ ಅಡುಗೆ ಮಾಡುವ ಸಿಬ್ಬಂದಿಯನ್ನು ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವುದರಿಂದ ಅವರಿಗೆ ಇತರ ಸರ್ಕಾರಿ ನೌಕರರಿಗೆ ನೀಡುವಂತೆ ಕನಿಷ್ಟ ವೇತನ ನೀಡಲು ಬರುವುದಿಲ್ಲವೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ನೀಡಿರುವ ಹೇಳಿಕೆಯನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣ ಕರ್ನಾಟಕ ರಾಜ್ಯದಲ್ಲಿ 1.14 ಲಕ್ಷ ಅಕ್ಷರ ದಾಸೋಹ ನೌಕರರಿದ್ದು ಅವರಿಗೆ ತಿಂಗಳಿಗೆ ಕೇವಲ 1200 ವೇತನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕನಿಷ್ಟ ವೇತನ ಜಾರಿಗೊಳಿಸಲು ಹಾಗೂ ಕೆಲಸ ಕಾಯಮಾತಿಗಾಗಿ ಒತ್ತಾಯಿಸಿ ಬಿಸಿಯೂಟ ಯೋಜನೆಯ ಖಾಸಗೀಕರಣವನ್ನು ವಿರೋಧಿಸಿ ಸಾಮಾಜಿಕ ಭದ್ರತೆಗಾಗಿ ಬೆಂಗಳೂರಿನಲ್ಲಿ ಡಿ.2ರಿಂದ ಅನಿರ್ದಿಷ್ಟಾವಧಿ ಹೋರಾಟವನ್ನು ಮಾಡುತ್ತಿರುವ ಮಹಿಳಾ ನೌಕರರು ಸಚಿವರ ಹೇಳಿಕೆಯಿಂದ ಮತ್ತಷ್ಟು ಆಕ್ರೋಶಕ್ಕೊಳಗಾಗಿದ್ದಾರೆ. ಡಿ.4ರಿಂದಲೇ ಸಂಪೂರ್ಣವಾಗಿ ಅಡುಗೆ ಕೆಲಸ ನಿಲ್ಲಿಸಿ ಎಲ್ಲಾ ಬಿಸಿಯೂಟ ನೌಕರರು ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಬೇಕು, ಹೋರಾಟಕ್ಕೆ ಸಾರ್ವಜನಿಕರು ಬೆಂಬಲಿಸಿ ಸಹಕರಿಸಬೇಕೆಂದು ಸಿಐಟಿಯು ವಿನಂತಿಸುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement