'ಛತ್ರಪತಿ' ಹೆಸರು ಬದಲಿಗೆ ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ: ಚಲನಚಿತ್ರದಲ್ಲಿ “aÚ}ÚîÚ~’ ಹೆಸರನ್ನು ಕೈಬಿಡುವಂತೆ ಒತ್ತಾಯಿಸಿ ಹಿಂದೂ ಶಿವಾಜಿ ಯುವಸೇನೆ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶೈಲೇಂದ್ರ ಕಂಬೈನ್ಸ್‌ನಲ್ಲಿ ದಿನೇಶ್ ಗಾಂಧಿ ನಿರ್ದೇಶಿಸಿ ನಿರ್ಮಾಣ ಮಾಡಿರುವ “aÚ}ÚîÚ~’ ಎಂಬ ಕನ್ನಡ ಚಲನಚಿತ್ರದ ಅಡಿಬರಹ(ಟ್ಯಾಗ್ ಲೈನ್)ದಲ್ಲಿ ಅಂಡರ್ ವರ್ಲ್ಡ್‌ಗೆ ಅಧಿಪತಿ ಎಂದು ಬರೆಯಲಾಗಿದೆ. ಇದು ಹಿಂದೂ ಜನಾಂಗದ ಮನಸ್ಸಿಗೆ ನೋವುಂಟು ಮಾಡಿದೆ. ರಾಷ್ಟ್ರದಲ್ಲಿ ಹಿಂದೂ ಸಂಘಟನೆ ಕಟ್ಟಲು ಶ್ರಮಿಸಿದ ಮಹಾನ್ ವ್ಯಕ್ತಿ ಶಿವಾಜಿ ಅವರನ್ನು ಈ ಮೂಲಕ ಅವಮಾನ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಚಿತ್ರದ ಟ್ಯಾಗ್‌ಲೈನ್‌ನಲ್ಲಿರುವ ಅಂಡರ್ ವರ್ಲ್ಡ್ ಎಂಬ ಪದ ಮತ್ತು ಚಲನಚಿತ್ರದ ಹೆಸರನ್ನು ಕೈಬಿಡುವಂತೆ ಕ್ರಮಕೈಗೊಳ್ಳಬೇಕು ಹಾಗೂ ಶಿವಾಜಿ ಬಿರುದಿನ ಗೌರವ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಹಿಂದೂ ಶಿವಾಜಿ ಯುವಸೇನೆಯ ಜಿಲ್ಲಾ ಪ್ರಮುಖ ರಮೇಶ್ ಬಾಬು, ನೂತನವಾಗಿ ಛತ್ರಪತಿ ಚಲನಚಿತ್ರದ ಅಡಿ ಬರಹದಿಂದ ಶಿವಾಜಿ ಅವರ ಹೆಸರಿಗೆ ಅವಮಾನವಾಗಿದೆ. ಮುಸಲ್ಮಾನರ ದಬ್ಬಾಳಿಕೆಯನ್ನು ಹತ್ತಿಕ್ಕಲು ಹಾಗೂ ಬ್ರಿಟಿಷರನ್ನು ಸದೆ ಬಡಿದು ಹಿಂದೂ ಸಾಮ್ರಾಜ್ಯ ಸ್ಥಾಪನೆ ಮಾಡಲು ಶ್ರಮಿಸಿದ ಶಿವಾಜಿ ಅವರ ಹೆಸರನ್ನು ಕೇವಲ ಹಣ ಮಾಡುವ ದೃಷ್ಟಿಯಿಂದ ಬಳಸಿಕೊಂಡು ಅವಮಾನ ಮಾಡುತ್ತಿರುವುದು ಸರಿಯಲ್ಲ ಎಂದು ದೂರಿದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಇಂದಿನ ಕೆಲ ಸಿನಿಮಾಗಳ ಅಡಿಬರಹಗಳು ಪ್ರಚೋದನಕಾರಿಯಾಗಿವೆ. ಚಿತ್ರರಂಗದಲ್ಲಿ ಇದೊಂದು ಹವ್ಯಾಸವಾಗಿ ಬೆಳೆದುಕೊಂಡಿದೆ.
ಇದನ್ನು ತಡೆಯುವ ಅಗತ್ಯವಿದೆ. ಇಂತಹ ಅಡಿ ಬರಹ ನೀಡುವ ಮೊದಲು ನಿರ್ದೇಶಕರು, ನಿರ್ಮಾಪಕರು ಹಲವು ಬಾರಿ ಯೋಚಿಸುವ ಅಗತ್ಯವಿದೆ. ಸರ್ಕಾರ ಕೂಡ ಚಿಂತಿಸಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮಂಜೋಜಿ ರಾವ್, ಭವಾನಿರಾವ್, ಕೇಶವ, ತಾನೋಜಿರಾವ್, ಗಾಯಿತ್ರಿ ಬಾಯಿ ಮತ್ತಿತರರು ಇದ್ದರು.