ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ಆರಾಧನಾ ಮಹೋತ್ಸವ

Vishwanath S
Updated On : 7 Dec 2013, 11:18 am

ಶಿವಮೊಗ್ಗ: ಅಗಜೆ ಸಂಗೀತ ವಿದ್ಯಾಲಯ ಡಿ.7ರಂದು ಸಂಜೆ 5.30ಕ್ಕೆ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಮಹೋತ್ಸವ ಹಮ್ಮಿಕೊಂಡಿದೆ. ವಿದ್ಯಾಲಯದ ವಿದ್ಯಾರ್ಥಿಗಳಿಂದ ದೀಕ್ಷಿತರ ನೊಟ್ಟು ಸ್ವರಗಳ ಗೋಷ್ಠಿ ಗಾಯನ ನಡೆಯಲಿದೆ. ಕೃಪಾ ಅವರಿಂದ ಹಾಡುಗಾರಿಕೆ ಪ್ರಸ್ತುತಗೊಳ್ಳಲಿದ್ದು, ವಯೋಲಿನ್- ಮತ್ತೂರು ಮಧುಮುರಳಿ, ಮೃದಂಗ- ಮೈಸೂರಿನ ಪಿ.ಎಸ್. ಶ್ರೀಧರ್, ತಬಲ- ಎಂ.ಯು. ರಾಘವೇಂದ್ರಪ್ರಭು ಸಹಕಾರ ನೀಡುವರು. ವಿವರಗಳಿಗಾಗಿ- 9448774731.
ಇಂದು ತೆಪ್ಪೋತ್ಸವ
ಶಿವಮೊಗ್ಗ: ಬಿ.ಬಿ. ರಸ್ತೆಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ, ಶ್ರೀ ಚಿದಂಬರೇಶ್ವರ ದೇವಸ್ಥಾನ ಹಾಗೂ ಶ್ರೀ ಭವಾನಿ ಶಂಕರ ದೇವಸ್ಥಾನಗಳ ಆಶ್ರಯದಲ್ಲಿ ಡಿ.8ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಡಿ.7ರಂದು ಮಧ್ಯಾಹ್ನ 3.30ಕ್ಕೆ ಗಂಗಾಭಾಗೀರಥಿ ಪೂರ್ಣಕುಂಭ ಸ್ವಾಗತ, ಸಂಜೆ 5.30ಕ್ಕೆ ತೆಪ್ಪೋತ್ಸವ, ದೀಪೋತ್ಸವ, ಮಹಾಮಂಗಳಾರತಿ ನಡೆಯುವುದು. 8ರಂದು ಸಂಜೆ 5.30ರಿಂದ ರಾಜಬೀದಿ ಉತ್ಸವ, 6.30ಕ್ಕೆ ಶ್ರೀಸ್ವಾಮಿಗೆ ಮಹಾರಂಗಪೂಜೆ, 7ಕ್ಕೆ ಶ್ರೀ ಭವಾನಿಶಂಕರಸ್ವಾಮಿ ಸನ್ನಿಧಿಯಲ್ಲಿ ಗಂಗಾರತಿ ಹಾಗೂ ಆರತಿ ತಟ್ಟೆ ಸ್ಪರ್ಧೆ (ಮಹಿಳೆಯರಿಗಾಗಿ), 7.15ಕ್ಕೆ ತೆಪ್ಪೋತ್ಸವ, ದೀಪ್ಪೋತ್ಸವ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ, ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುವುದು.
ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ
ಹೊಸನಗರ: ಉತ್ತಮ ಆರೋಗ್ಯ ಮತ್ತು ನೆಮ್ಮದಿಯ ಬದುಕಿಗಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಪಂ ಸದಸ್ಯೆ ಜ್ಯೋತಿ ಚಂದ್ರಮೌಳಿ ಹೇಳಿದರು. ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಪ.ಜಾತಿ ಕಾಲೋನಿಯಲ್ಲಿ ಬಾಕ್ಸ್ ಚರಂಡಿ ಕಾಮಗಾರಿಗೆ ಚಾಲನೆ ನೀಡಿ, ಸ್ವಚ್ಛತೆಯಲ್ಲಿ ಚರಂಡಿಗಳ ನಿರ್ಮಾಣದ ಪಾತ್ರ ಗಮನಾರ್ಹ ಎಂದರು.
ಉತ್ತಮ ಗುಣಮಟ್ಟದ ಕಾಮಗಾರಿಗಾಗಿ ಸ್ಥಳೀಯರು ಹೆಚ್ಚಿನ ಕಾಳಜಿ ತೋರಬೇಕು ಎಂದರು.
ಗ್ರಾಪಂ ಅಧ್ಯಕ್ಷರಾದ ಕೃಷ್ಣ ಬಿ. ಶೆಟ್ಟಿ, ತಾಪಂ ಸದಸ್ಯರಾದ ಕುಬೇರಪ್ಪ ಗ್ರಾಪಂ ಸದಸ್ಯರಾದ ಬಿ.ಜಿ. ಚಂದ್ರಮೌಳಿ, ವೈ.ಆರ್. ಪುಟ್ಟಪ್ಪ ಎಂ.ಪಿ. ಲೋಹಿತ್, ಗುರುಮೂರ್ತಿ, ಜಯಂತ್ ಹಾಗೂ ಪಿಡಿಒ ಶ್ರೀಧರ್ ಹಾಜರಿದ್ದರು.
ಇಂದು ಪ್ರತಿಭಾ ಕಾರಂಜಿ
ಭದ್ರಾವತಿ: ತಾಲೂಕು ಮಟ್ಟದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಡಿ.7ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಿಇಒ ಸೋಮಶೇಖರಯ್ಯ ತಿಳಿಸಿದ್ದಾರೆ.  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಕ್ಕಳು, ಶಿಕ್ಷಕರು, ಪೋಷಕರು, ಜನಪ್ರತಿನಿಧಿಗಳು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅವರು ಕೋರಿದ್ದಾರೆ.
121 ಅಭ್ಯರ್ಥಿಗಳ ನೋಂದಣಿ
ಶಿವಮೊಗ್ಗ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನವೆಂಬರ್ ಮಾಹೆಯಲ್ಲಿ ಜಿಲ್ಲೆಯ 81 ಪುರುಷರು ಹಾಗೂ 40 ಮಹಿಳೆಯರು ಸೇರಿದಂತೆ ಒಟ್ಟು 121 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಎಸ್‌ಎಸ್‌ಎಲ್‌ಸಿ ಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವ 13, ಎಸ್‌ಎಸ್‌ಎಲ್‌ಸಿ ಹಾಗೂ ಪದವೀಧರರಲ್ಲದ 60, ಪದವೀಧರರು-12, ತಾಂತ್ರಿಕ ಪದವೀಧರರು-36 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.
ವಿಜ್ಞಾನ ಮಂಥನ
ಸಾಗರ: ಇಲ್ಲಿನ ವಿಜ್ಞಾನ ವೇದಿಕೆಯು ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿಯ ಸಹಕಾರದೊಂದಿಗೆ ಡಿ. 7, 8 ಹಾಗೂ 9ರಂದು ಸಮೀಪದ ಅಮಟೆಕೊಪ್ಪದ ಹೊಂಗಿರಣ ಶಾಲೆಯ ಆವರಣದಲ್ಲಿ ವಿಜ್ಞಾನ ಮಂಥನ ಕಾರ್ಯಕ್ರಮ ಏರ್ಪಡಿಸಿದೆ. ಪ್ರತಿದಿನ ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ವಿವಿಧ ಉಪನ್ಯಾಸ ನಡೆಯಲಿವೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಎಂ.ಆರ್.ಎಂ. ಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಿ. 7ರಂದು ಕುವೆಂಪು ವಿವಿಯ ವಸಂತ ಕುಮಾರ ಪೈ, ಬೆಂಗಳೂರಿನ ರಾಮಕೃಷ್ಣ ಧಾಮ್ಲೆ ಲೇಸರ್ ಕುರಿತು ಉಪನ್ಯಾಸ ನೀಡಲಿದ್ದಾರೆ. ಡಿ. 8ರಂದು ನ್ಯಾನೋ ತಂತ್ರಜ್ಞಾನದ ಕುರಿತು ಪ್ರೊ. ಎಚ್.ಎನ್. ಸುಧೀಂದ್ರ ಹಾಗೂ ಆಕಾಶ ವೀಕ್ಷಣೆ ಕುರಿತು ಡಾ. ಕೆ.ಎಲ್. ಶ್ರೀಪತಿ ಮತ್ತು ನಾಗೇಶ ಉಪನ್ಯಾಸ ನೀಡಲಿದ್ದಾರೆ. ಡಿ. 9ರಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಅರುಣ ಉಮರ್ಜಿ, ಎಲ್.ಬಿ.ಕಾಲೇಜಿನ ಶ್ರೀಧರ ರಾವ್ ಮತ್ತು ಸುರೇಶ್ ಉಪನ್ಯಾಸ ನೀಡಲಿದ್ದಾರೆ. ಕೆಎಸ್ಸಿಎಸ್ಟಿಯ ಡಾ. ಎಸ್.ಜಿ. ಶ್ರೀಕಂಟೇಶ್ವರಸ್ವಾಮಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ವೇದಿಕೆಯ ಅಧ್ಯಕ್ಷ ಎಚ್.ಎಲ್.ಎಸ್. ರಾವ್ ತಿಳಿಸಿದ್ದಾರೆ.
ಇಂದು ಉಪನ್ಯಾಸ
ಸಾಗರ: ಇಲ್ಲಿನ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶೃಂಗೇರಿ ಶಂಕರಮಠ ಸಾಗರ ಶಾಖೆ ಆಶ್ರಯದಲ್ಲಿ ಡಿ.7ರಂದು ಸಂಜೆ 5ಕ್ಕೆ ಅಗ್ರಹಾರದಲ್ಲಿರುವ ಶಂಕರಮಠದಲ್ಲಿ ಸಂಸಾರ- ಸಂಸ್ಕಾರ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಪ್ರಖರ ವಾಗ್ಮಿ ಹಾಗೂ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಹಾಗೂ ಮಂಕುತಿಮ್ಮನ ಕಗ್ಗ ವ್ಯಾಖ್ಯಾನಕಾರ ಜಿ.ಎಸ್.ನಟೇಶ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದೇ ದಿನ ಬೆಳಗ್ಗೆ 9.30ರಿಂದ ಕುಟುಂಬ ಮಿಲನ ಕಾರ್ಯಕ್ರಮ ಇರುತ್ತದೆ.
ಶತಮಾನೋತ್ಸವ
ತೀರ್ಥಹಳ್ಳಿ: ಡಾ. ಬಿ.ಎನ್. ರಂಗಪ್ಪನವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಕೆ.ಟಿ.ಕೆ. ಕಲ್ಯಾಣ ಮಂದಿರದಲ್ಲಿ ನೆರವೇರಲಿದೆ. ನಿವೃತ್ತ ಪ್ರಾಂಶುಪಾಲ, ಪ್ರೊ. ಇಂದೂಧರ ಎಚ್. ಪೂಜಾರ್ ಅಧ್ಯಕ್ಷತೆ ವಹಿಸುವರು. ಸಚಿವ ಕಿಮ್ಮನೆ ರತ್ನಾಕರ್, ಸಾಹಿತಿ ಪ್ರೊ. ಜಿ.ಕೆ. ಗೋವಿಂದರಾವ್, ಡಾ. ಜೆ.ಕೆ. ರಮೇಶ್, ಮಾಮ್ಕೋಸ್ ಉಪಾಧ್ಯಕ್ಷ ಕೆ. ನರಸಿಂಹ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಮಯ ಸಂಜೆ 4 ಗಂಟೆಗೆ.
ಅವಿರೋಧ ಆಯ್ಕೆ
ಭದ್ರಾವತಿ: ಭದ್ರಾವತಿ ತಾಲೂಕು ಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷರ ರಾಜಿನಾಮೆಯಿಂದ ಎರಡನೇ ಅವಧಿಗೆ ತೆರವಾದ ಸ್ಥಾನಕ್ಕೆ ಡಿ.4ರಂದು ಚುನಾವಣೆ ನಡೆದು ಸಿರಿಯೂರು ಕ್ಷೇತ್ರದ ಎಲ್. ಬದರಿನಾಯ್ಕ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಲೋಕೋಪಯೋಗಿ ಮತ್ತು ಒಳನಾಡು ಜಲಸಾರಿಗೆ ಬಂದರು ಇಲಾಖೆಯ ಸ. ಕಾರ್ಯನಿರ್ವಾಹಕ ಎಂಜಿನಿಯರ್ ವೀರಭದ್ರಾಚಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement