ರೈಲು ನಿಲುಗಡೆ ಮುಂದೂಡಿಕೆ
ಶಿವಮೊಗ್ಗ: ಕುಂಸಿಯಲ್ಲಿ ಡಿ.11 ರಂದು ಆಯೋಜಿಸಲಾಗಿದ್ದ ಬೆಂಗಳೂರು-ಶಿವಮೊಗ್ಗ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ವಿಧಾನ ಪರಿಷತ್ ಸಭಾಪತಿ ಕಾಗೋಡು ತಿಮ್ಮಪ್ಪನವರು ಹಸಿರು ನಿಶಾನೆ ತೋರಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಕಾರ್ಯಕ್ರಮ ಮೂಂದುಡಲಾಗಿದೆ ಎಂದು ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದ್ದಾರೆ.
ಶಿವಮೊಗ್ಗ- ತಾಳಗುಪ್ಪ ರೈಲಿನ ನಿಲುಗಡೆಯ ವಿಚಾರವಾಗಿ ಜನತೆಯೆ ಅಪೇಕ್ಷೆಯನ್ನು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರ ಗಮನಕ್ಕೆ ತಂದಿದ್ದರು. ರೈಲು ನಿಲುಗಡೆ 11 ರಿಂದ ಆರಂಭವಾಗಲಿದ್ದು, ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮ ಶೀಘ್ರದಲ್ಲೇ ನಡೆಯಲಿದೆ ಎಂದು ಆಯನೂರು ಮಂಜುನಾಥ್ ತಿಳಿಸಿದ್ದಾರೆ.