ಇಂದಿನಿಂದ ವೀಣಾ ನಾದ ಧ್ಯಾನ ಯಜ್ಞ
ಶಿವಮೊಗ್ಗ: ಗುರುಗುಹ ಸಂಗೀತ ಮಹಾವಿದ್ಯಾಲಯವು ಆಯೋಜಿಸಿರುವ ವೀಣಾ ಮಹೋತ್ಸವ ದಶಮಾನೋತ್ಸವದ ಅಂಗವಾಗಿ ಸೋಮವಾರದಿಂದ ಡಿ. 18ರವರೆಗೆ ಪ್ರತಿ ದಿನ ನಸುಕಿನಲ್ಲಿ ವೀಣಾ ನಾದ ಧ್ಯಾನಯಜ್ಞ ಎಂಬ ವಿಶೇಷ ಕಾರ್ಯಕ್ರಮ ರೂಪಿತಗೊಂಡಿದೆ.
ರವೀಂದ್ರ ನಗರದ 1ನೇ ತಿರುವಿನಲ್ಲಿರುವ ಅನುಗ್ರಹದಲ್ಲಿ (ಡಾ.ವೆಂಕಟರಾವ್ ನಿವಾಸ) ಬೆಳಿಗ್ಗೆ 6.30ರಿಂದ 8ರವರೆಗೆ ನಡೆಯುವುದು. ಸರಸ್ವತಿ ಹಾಗೂ ವೀಣೆಗೆ ಪೂಜಾ ಕೈಂಕರ್ಯದೊಂದಿಗೆ ವಿಶೇಷವಾಗಿ ಧ್ವನಿವರ್ಧಕ ರಹಿತವಾಗಿ ವೀಣಾ ವಾದನ ಕಾರ್ಯಕ್ರಮದ ವಿಶೇಷ.
ಎಂದು ಯಾರ ಕಾರ್ಯಕ್ರಮ: ಡಿ.9ರಂದು ಪ್ರೊ.ರಾ.ವಿಶ್ವೇಶ್ವರನ್, 10ರಂದು ವಿ.ಶುಭಾ ಸಂತೋಷ್, 11ರಂದು ವಿ.ವಾಣಿ ಯದುನಂದನ್, 12ರಂದು ವಿ. ಮೀನಾಮೂರ್ತಿ ಹಾಗೂ ವಿ.ಅನುರಾಧಾ ರಾವ್, 13ರಂದು ವಿಭಾಗ್ಯಲಕ್ಷ್ಮಿ ಚಂದ್ರಶೇಖರನ್, 14ರಂದು ಬೆಳಿಗ್ಗೆ ವಿ. ಜಿ.ಆರ್.ಎಸ್.ಮೂರ್ತಿ, 15ರಂದು ವಿ.ಅರುಂಧತಿ ವಿ.ರಾವ್, 16ರಂದು ವಿ. ಪ್ರಶಾಂತ ಅಯ್ಯಂಗಾರ್, 17ರಂದು ವಿ. ಬಿ.ಕೆ.ವಿಜಯಲಕ್ಷ್ಮಿ ರಘು, 18ರಂದು ವಿ. ಆರ್.ಕೆ.ಪದ್ಮನಾಭ ಅವರಿಂದ ವೀಣಾ ವಾದನವಿರುತ್ತದೆ.