ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಡಿಸಿ ಕಚೇರಿ ಸುಧಾರಿಸಲಿ

Rashmi Kasaragodu
Updated On : 9 Dec 2013, 10:50 am

ಜಿಲ್ಲಾಧಿಕಾರಿ ಕಚೇರಿಗೆ ಪ್ರತಿ ನಿತ್ಯ ನೂರಾರು ಜನ ಸಾರ್ವಜನಿಕರು, ಅಧಿಕಾರಿಗಳು ಬರುತ್ತಾರೆ. ಆದರೆ, ಬಿಸಿಲ ಬೇಗೆಯಿಂದ ಬಳಲಿದ ಗಂಟಲಿಗೆ ಒಂದು ಹನಿ ನೀರು ಕೂಡ ಇಲ್ಲಿ ಸಿಗುವುದಿಲ್ಲ. ಈ ಬಗ್ಗೆ ಅನೇಕ ಬಾರಿ ಅಧಿಕಾರಿ ವರ್ಗ, ಸಾರ್ವಜನಿಕರು, ಸಂಘ, ಸಂಸ್ಧೆಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ ಕಚೇರಿ ಆವರಣದ ಶೌಚಾಲಯಗಳು ಸಂಪೂರ್ಣ ಹಾಳಾಗಿವೆ. ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನ ಹರಿಸಿ, ಕಚೇರಿ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ಸ್ವಚ್ಛ ಮಾಡಲು ಆದೇಶ ನೀಡಬೇಕು.
ಟಿ ಕರಿಯಪ್ಪ, ಗ್ರಾಮಸ್ಥ.

ರಸ್ತೆ ಕಾಮಗಾರಿ ಕಳಪೆ
ಹೊಸಮನೆ ಮುಖ್ಯರಸ್ತೆ ಡಾಂಬರ್ ಕಾಮಗಾರಿ ಕಳಪೆಯಾಗಿದೆ. ನಿಗದಿತ ಇಂಚಿಗಿಂತ ಕಡಿಮೆ ಡಾಂಬರ್ ಹಾಕಿದ್ದಾರೆ. 1 ಇಂಚು ಮಾತ್ರ ಡಾಂಬರ್ ಹಾಕಿದ್ದು, ಮಳೆಗಾಲದಲ್ಲಿ ಕಿತ್ತುಹೋಗುತ್ತದೆ. ನಗರಸಭೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ. ಇದೇ ರೀತಿ ರಸ್ತೆ ಕಾಮಗಾರಿ ನಡೆದರೆ ಸಾರ್ವಜನಿಕರ ಹಣ ಪೋಲಾಗುತ್ತದೆ. ನಗರಸಭೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು.
ಟಿ ಫ್ರಾನ್ಸಿಸ್ ದೇವದಾನಂ, ವಿನೋಬನಗರ

ರಸ್ತೆ ಸರಿಪಡಿಸಿ
ವಿವೇಕಾನಂದ ಬಡಾವಣೆಯ ಅಡ್ಡ ರಸ್ತೆಗಳು ಮಣ್ಣಿನಿಂದ ಕೂಡಿದ್ದು, ಓಡಾಡುವುದೇ ಕಷ್ಟಕರ. ಚರಂಡಿಯ ಪೈಪ್ಲೈನ್ ಸಂಪರ್ಕಿಸಲು ತೆಗೆದ ಗುಂಡಿಗಳು ಇದೀಗ ಮುಚ್ಚಿದರೂ ಕಾಂಕ್ರಿಟ್ ಹಾಕದೇ ಗುಂಡಿಗಳು ಬಿದ್ದಿವೆ. ಇನ್ನೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗೆ ಹೋಗುವ ರಸ್ತೆ ಹಳ್ಳ, ಗುಂಡಿಗಳಿಂದ ತುಂಬಿದ್ದು, ಸರಿಯಾದ ರಸ್ತೆ ಸಂಪರ್ಕ ಇಲ್ಲ. ಬಡಾವಣೆಯ 60 ಅಡಿ ರಸ್ತೆಯಲ್ಲಿ ಬಸ್ ನಿಲ್ದಾಣವಿದೆ. ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸಿ ರಸ್ತೆಗಳಿಗೆ ಕಾಂಕ್ರಿಟ್ ಹಾಕಲು ಸೂಚನೆ ನೀಡಬೇಕು.
ಟಿ ಹರೀಶ್, ಸ್ಥಳೀಯ ನಾಗರಿಕರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement