ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಗಯಕ್ಷೇಶ್ವರಿ ದೇವಸ್ಥಾನ ಶಂಕುಸ್ಥಾಪನೆ

Rashmi Kasaragodu
Updated On : 9 Dec 2013, 10:56 am

ಸೊರಬ: ದೇವರನ್ನು ಬಿಟ್ಟು ಯಾರು ಏನನ್ನು ಮಾಡಲಾಗುವುದಿಲ್ಲ, ಬೇಡುವ ರೀತಿಯಿಂದ ಫಲ ಪ್ರಮಾಣ ನಿರ್ಧಾರವಾಗುತ್ತದೆ. ದೇವರು, ಧರ್ಮ ಮತ್ತು ಮಾನವ ಇವುಗಳ ಮಧ್ಯೆ ಬಹಳಷ್ಟು ಚರ್ಚೆ ನಡೆಯುವ ಅವಶ್ಯಕತೆಯಿದೆ ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮಿಗಳು ತಿಳಿಸಿದರು.
ಕಪ್ಪಗಳಲೆ ಗ್ರಾಮದಲ್ಲಿ ನಡೆಸಿದ ನಾಗಯಕ್ಷೇಶ್ವರಿ ದೇವಸ್ಥಾನದ ಶಂಕುಸ್ಥಾಪನೆ ಸಮಾರಂಭದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ವಿಜ್ಞಾನಿಗಳಿಗೂ ದೇವರ ಮೇಲೆ ಅಪಾರವಾದ ನಂಬಿಕೆಯಿದೆ, ಉದಾಹರಣೆಗಾಗಿ ಇತ್ತೀಚೆಗೆ ಭಾರತದ ವಿಜ್ಞಾನಿಗಳು ಮಂಗಳ ಗ್ರಹಕ್ಕೆ ಉಪಗ್ರಹವನ್ನು ಹಾರಿಸಿದ್ದಾರೆ. ಅದು ಯಶಸ್ವಿಯಾಗಿ ಮಂಗಳದತ್ತ ತನ್ನ ಪ್ರಯಣವನ್ನು ಬೆಳೆಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಮೈಸೂರಿನ ಧನಲಕ್ಷ್ಮಿ ದೇವಸ್ಥಾನಕ್ಕೆ ಉತ್ಸವದ ಪಲ್ಲಕ್ಕಿಯನ್ನು ಧಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸುಕಿ ಸುಬ್ರಮಣ್ಯ ಟ್ರಸ್ಟಿನ ಅಧ್ಯಕ್ಷ ಕೆ.ಎಚ್. ಗಣಪತಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿ.ಪಂ. ಸದಸ್ಯರಾದ ಹುಣವಳ್ಳಿ ಗಂಗಾಧರಪ್ಪ, ಕುಮಾರ್ ಸ್ವಾಮಿ ದುಂಡಸಿ, ಟ್ರಸ್ಟಿನ ಕಾರ್ಯದರ್ಶಿ ಪುಂಡಲಿಕಪ್ಪ, ಸದಸ್ಯ ಡಾಕಪ್ಪ, ಗುತ್ತಿಗೆದಾರರಾದ ಅಶೋಕ, ರಘು ಭಂಡಾರಿ, ಉಳವಿ ಸ್ವಾಮಿ, ದಿನಕರ್ ಭಾವೆ, ಎನ್. ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement