ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶುರುವಾಗದ ಖರೀದಿ ಕೇಂದ್ರ: ರೈತರಲ್ಲಿ ಆತಂಕ

Rashmi Kasaragodu
Updated On : 9 Dec 2013, 10:51 am

ಶಿರಾಳಕೊಪ್ಪ: ಸರ್ಕಾರ ಮೆಕ್ಕೆಜೋಳ, ಬತ್ತದ ಖರೀದಿ ಕೇಂದ್ರ ಪ್ರಾರಂಭವಾಗಿದೆ ಎಂದು ಹೇಳಿ ಖರೀದಿ ಕೇಂದ್ರಕ್ಕೆ ಬೋರ್ಡ್ ಹಾಕಲಾಗಿದೆಯೇ ವಿನಃ ಈ ವರೆಗೆ ಖರೀದಿ ಕೇಂದ್ರ ಪ್ರಾರಂಭವಾಗದೇ ರೈತರು ಪರದಾಡುವಂತಾಗಿದೆ.
ಈಗಾಗಲೇ ಭಾರಿ ಪ್ರಮಾಣದಲ್ಲಿ ಬತ್ತದ ದರ ಮಾರುಕಟ್ಟೆಯಲ್ಲಿ ಕುಸಿದಿದ್ದು, ಈ ಬಗ್ಗೆ ಖರೀದಿ ಕೇಂದ್ರದ ಅಧಿಕಾರಿಯನ್ನು ಕೇಳಿದರೆ ಸೋಮವಾರದಿಂದ ಖರೀದಿ ಕೇಂದ್ರ ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ.
ಅವ್ಯವಸ್ಥೆ ಆಗರ: ಸೋಮವಾರದಿಂದ ಪ್ರಾರಂಭವಾಗುವ ಖರೀದಿ ಕೇಂದ್ರದಲ್ಲಿ ಮ್ಯಾನೇಜರ್ ಮಾತ್ರ ಇದ್ದು, ಯಾವೊಬ್ಬ ಸಿಬ್ಬಂದಿಯೂ ಇಲ್ಲದೇ ಬಂದವರಿಗೆ ಸಮಾಧಾನದ ಉತ್ತರ ಹೇಳುತ್ತಾ ಕುಳಿತಿದ್ದಾರೆ. ಸೋಮವಾರ ಖರೀದಿ ಕೇಂದ್ರ ಪ್ರಾರಂಭವಾದರೆ ಖರೀದಿ ಕೇಂದ್ರದಲ್ಲಿ ವ್ಯವಸ್ಥೆ ನೋಡಲು ಕನಿಷ್ಠ ನಾಲ್ಕ ಜನರು ಬೇಕಾಗುತ್ತದೆ.
ಪರ್ಮಿಟ್ ವಿತರಣೆ: ಎರಡು ಹೋಬಳಿಯ ಕೇಂದ್ರ ಶಿರಾಳಕೊಪ್ಪದಲ್ಲಿ ಇದ್ದು, ತಾಳಗುಂದ ಹೋಬಳಿಯಲ್ಲಿ 5 ಸಾವಿರ ಹೆಕ್ಟೇರ್ ಹಾಗೂ ಉಡಗಣಿ ಹೋಬಳಿಯಲ್ಲಿ 3 ಸಾವಿರ ಹೆಕ್ಟೇರ್ ಬತ್ತದ ಬೆಳೆ ಇದೆ. ಶಿರಾಳಕೊಪ್ಪ ನಾಡಕಚೇರಿ ಉಪ- ತಹಸೀಲ್ದಾರ್ ಖರೀದಿ ಕೇಂದ್ರಕ್ಕೆ ಆಗಮಿಸಿ ನಾಡಕಚೇರಿಯಿಂದ ಐದುನೂರು ಕ್ವಿಂಟಲ್ಗೆ ಪರವಾನಗಿ ಕೊಡಲಾಗಿದೆ.
ದರ ನಿಗದಿ: ಈ ಮೊದಲು ಸಣ್ಣ ಬತ್ತಕ್ಕೆ 1345 ಹಾಗೂ ದಪ್ಪ ಬತ್ತಕ್ಕೆ 1600ರೂ ನಿಗದಿ ಮಾಡಿದ್ದ ಸರ್ಕಾರ ರೈತರ ತೀವ್ರ ವಿರೋಧ ಕಂಡು ಈಗ ಎಲ್ಲ ಬತ್ತಕ್ಕೂ ಏಕ ಪ್ರಕಾರದ ದರ ನಿಗದಿ ಮಾಡಿದೆ. ಆದರೆ, ಖರೀದಿ ಕೇಂದ್ರದಲ್ಲಿ ರೈತರು ತಂದ ಬತ್ತದ ಚೀಲವನ್ನು ಸುರುವಿ ಮತ್ತೆ ಅಲ್ಲಿರುವ ಹಮಾಲಿಗಳು ಚೀಲ ತುಂಬುವ ಕಾರ್ಯದಿಂದ ಖರೀದಿ ಕಾರ್ಯ ನಿಧಾನವಾಗಲಿದೆ.
ಹಾಗೆಯೇ ಖಾಲಿ ಚೀಲಕ್ಕೆ 13 ನಿಗದಿಪಡಿಸಿರುವದು ತುಂಬಾ ಅನ್ಯಾಯ. ಸರ್ಕಾರ ತಾವೇ ಚೀಲ ಕೊಡಲಿ. ಇಲ್ಲವಾದರೆ ಕನಿಷ್ಠ 25 ನೀಡಲಿ ಎಂದು ಖರೀದಿ ಕೇಂದ್ರಕ್ಕೆ ಆಗಮಿಸಿದ ಬಿಳಕಿ ಪಾಲಾಕ್ಷಪ್ಪ, ತಾಳಗುಂದ ಪಾಲಾಕ್ಷಪ್ಪ, ರವಿಕುಮಾರ್ ಇತರರು ಒತ್ತಾಯಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement