ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಣ ವಂಚನೆ: ಇಬ್ಬರ ಬಂಧನ

Rashmi Kasaragodu
Updated On : 9 Dec 2013, 10:50 am

ಶಿರಾಳಕೊಪ್ಪ: ಬಂಗಾರ ಸಿಕ್ಕಿದೆ ತೊಂದರೆಗಾಗಿ ಮಾರುತ್ತಿದ್ದೇವೆ ಎಂದು ಹೇಳಿ 70 ಸಾವಿರ ಪಡೆದು ಮೋಸ ಮಾಡಿದ್ದ, ಆರೋಪಿಗಳನ್ನು ಶಿರಾಳಕೊಪ್ಪ ಪೊಲೀಸರು ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಳೆದ ಸೆಪ್ಟೆಂಬರ್ನಲ್ಲಿ ಬಂಗಾರ ಸಿಕ್ಕಿದೆ ಅದನ್ನು ಕೊಡುವುದಾಗಿ ತಿಳಿಸಿ ಸಕಲೇಶಪುರದ ಪ್ರದೀಪ ಎಂಬವರಿಂದ 70 ಸಾವಿರ ಪಡೆದು ಪರಾರಿಯಾಗಿದ್ದ ಇಬ್ಬರು ಆರೋಪಿಗಳಾದ ಆನವಟ್ಟಿ ಹನುಮಂತಪ್ಪ, ಶಿಕಾರಪುರದ ಹತ್ತಿರದ ಸಿದ್ದನಪುರದ ಅಮರ್ ಅವರನ್ನು ಶಿರಾಳಕೊಪ್ಪ ಪಟ್ಟಣದಲ್ಲಿ ಬಸ್ ಹತ್ತುವಾಗ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 28 ಸಾವಿರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಾಲಕಿಯರು ಕಾಣೆ
ಶಿರಾಳಕೊಪ್ಪ: ಸಮಿಪದ ನಾಗಿಹಳ್ಳಿಯ ಇಬ್ಬರು ಬಾಲಕಿಯರು (ಅಕ್ಕ-ತಂಗಿ) ಸಂಬಂಧಿಗಳ ಮನೆಯಲ್ಲಿ ಇಪ್ಪತ್ತು ರು. ಕದ್ದಿದ್ದು, ಮನೆಯವರಿಗೆ ಗೊತ್ತಾದರೆ ತಂದೆ- ತಾಯಿ ಹೊಡೆಯಬಹುದು ಎಂದು ಹೆದರಿ ಪರಾರಿಯಾಗಿದ್ದಾರೆ. ಡಿ. 4ರಂದು ಮನೆ ಹತ್ತಿರದ ಸಂಬಂಧಿಗಳ ಮನೆಯಲ್ಲಿ ಹಣ ಕದ್ದ 13 ವರ್ಷದ ರುಚಿತ ಹಾಗೂ ಅವಳ ತಂಗಿ 11 ವರ್ಷದ ಅರ್ಚಿತ ಎಂಬವರು ಮನೆ ಬಿಟ್ಟು ಹೊದವರು ಇದುವರೆಗೆ ಮನೆಗೆ ಬಂದಿಲ್ಲ. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಬಾಲಕಿ ತಂದೆ ಕುಮಾರ್ ದೂರು ನೀಡಿದ್ದಾರೆ.
ಅಕ್ರಮ ತಡೆಗೆ ಆಗ್ರಹ
ಹೊಸನಗರ:  ಅನ್ನ ಭಾಗ್ಯ ಯೋಜನೆ ಅರ್ಹ ಫಲಾನುಭವಿಗಳ ಪಾಲಿಗೆ ಲಭಿಸದೆ ಉಳ್ಳವರ ಪಾಲಾಗುತ್ತಿದೆ. ಇಂತಹ ಅಕ್ರಮ ತಡೆಗಟ್ಟುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟೇಲ್ ಗರುಡಪ್ಪಗೌಡ ಒತ್ತಾಯಿಸಿದರು. ಪಟ್ಟಣದ ಗಾಂಧಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಪಿಎಲ್ ಕುಟುಂಬಗಳ ಕಲ್ಯಾಣದ ನಿಟ್ಟಿನಲ್ಲಿ ಸರ್ಕಾರ ಬಂದ ಪ್ರಾರಂಭದಿಂದ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದು ಫಲಾನುಭವಿಗಳಿಗೆ 30 ಕೆಜಿಯಷ್ಟು ಅಕ್ಕಿ ಒದಗಿಸಲಾಗುತ್ತಿದೆ. ಆದರೆ, ವಿತರಣಾ ವ್ಯವಸ್ಥೆ ಸರಿಯಾಗಿಲ್ಲ ಎಂದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement