'ನ್ಯಾ. ಸದಾಶಿವ ವರದಿ ಜಾರಿಯಾಗಲಿ'
ಹೊಳಲ್ಕೆರೆ: ರಾಜ್ಯ ಸರ್ಕಾರ ಸದಾಶಿವ ಆಯೋಗವನ್ನು ಜಾರಿಗೆ ತಂದು ದಲಿತರ ಪ್ರಗತಿಗೆ ಸೌಕರ್ಯ ಕಲ್ಪಿಸಬೇಕು. ಡಾ. ಬಿ.ಆರ್.ಆಂಬೇಡ್ಕರ್ ಆಶಯದಂತೆ ದಲಿತರಿಗೆ ಪ್ರತ್ಯೇಕ ಮತಹಕ್ಕು ಪದ್ಧತಿಯನ್ನು ಸರ್ಕಾರ ಜಾರಿಗೆ ತರಲು ಮುಂದಾಗಬೇಕೆಂದು ದಲಿತ ನಾಯಕ ಡಿ. ಜಯಣ್ಣ ಹೇಳಿದರು. ಪಟ್ಟಣದ ಪ್ರಾಥಮಿಕ ಶಾಲಾ ಅವರಣದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ 57ನೇ ಮಹಾ ಪರಿನಿರ್ವಾಣ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಬಲಿಷ್ಠ ಪ್ರಜಾಪ್ರಭುತ್ವ ಪರಿವರ್ತನೆ ಹಾಗೂ ಸಾಮಾಜಿಕ ಶೋಷಣೆ ಮುಕ್ತ ದೇಶ ಕಟ್ಟುವ ಚಿಂತನೆ ಹೊಂದಿದ ಡಾ. ಬಿ.ಆರ್. ಅಂಬೇಡ್ಕರ್ ದೇಶದ ಪ್ರಥಮ ಕಾನೂನು ಮಂತ್ರಿಯಾಗಿ ರಚಿಸಿದ ಸಂವಿಧಾನದ ಮೂಲ ಆಶಯಕ್ಕೆ ಪೂರಕವಾಗಿ ಮೀಸಲಾತಿ ಇಲ್ಲ ಎಂದರು.