ರಾಷ್ಟ್ರೀಯ ವಿಜ್ಞಾನ ಶಿಬಿರಕ್ಕೆ ಆಯ್ಕೆ
ನಾಯಕನಹಟ್ಟಿ: ಗುಜರಾತ್ ರಾಜ್ಯದ ಅಹಮದಾಬಾದ್‌ನ ವಿಜ್ಞಾನ ನಗರಿಯಲ್ಲಿ ಡಿ.13ರಿಂದ 15ರ ವರೆಗೆ ಮೂರು ದಿನಗಳ ರಾಷ್ಟ್ರೀಯ ವಿಜ್ಞಾನ ಶಿಬಿರಕ್ಕೆ ನಾಯಕನಹಟ್ಟಿಯ ದ್ಯಾವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
2013ರ ಅಂತಾರಾಷ್ಟ್ರೀಯ ನೀರಿನ ಸಹಕಾರ ವರ್ಷಾಚರಣೆಯ ಅಂಗವಾಗಿ ಒಂದು ವರ್ಷದ ನಿರಂತರ ಸಮೀಕ್ಷಾ ಕಾರ್ಯವನ್ನು ವಿದ್ಯಾರ್ಥಿಗಳು ಕೈಗೊಂಡಿದ್ದರು. ಇವರು ನೀರಿನ ಸಂರಕ್ಷಣೆಯ ಪ್ರಾಚೀನ ವಿಧಾನಗಳು ಹಾಗೂ ನವೀನ ಪದ್ಧತಿಗಳು ಮತ್ತು ಅವುಗಳ ಮಹತ್ವದ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಈ ಶಾಲೆಯು ವಿಜ್ಞಾನ ಕ್ಲಬ್‌ಗಳು ಸಲ್ಲಿಸಿದ್ದ ಎರಡು ಯೋಜನಾ ವರದಿಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿವೆ.
ವಿದ್ಯಾರ್ಥಿಗಳಾದ ವೈ.ಎಂ. ಶಾರದ, ಪಿ.ಎಂ. ಚಂದನ, ಕೆ.ಟಿ. ಚಿನ್ಮಯಪ್ರಭು, ಎಂ.ಟಿ. ತರುಣ್ ತಂಡದಲ್ಲಿದ್ದಾರೆ. ಯೋಜನೆಗಳಿಗೆ ಶಿಕ್ಷಕರಾದ ಕೆ.ಎಂ. ಶಿವಸ್ವಾಮಿ ಹಾಗೂ ಎಂ.ಆರ್. ಸಿದ್ದೇಶ್‌ಕುಮಾರ್ ಮಾರ್ಗದರ್ಶಿ ಶಿಕ್ಷಕರಾಗಿದ್ದಾರೆ.