ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿದ್ಯಾರ್ಥಿಗಳಿಗೆ ಹಳಸಿದ ಅನ್ನ, ತಿನ್ನದಿದ್ದರೆ ಅದೂ ಇಲ್ಲ

Mainashree
Updated On : 11 Dec 2013, 11:14 am

ಕ.ಪ್ರ.ವಾರ್ತೆ   ಚಳ್ಳಕೆರೆ    ಡಿ.10
ಪಟ್ಟಣದ ಪಾವಗಡ ರಸ್ತೆಯ ಸರ್ಕಾರದ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ನಿಲಯದಲ್ಲಿ ಮಕ್ಕಳಿಗೆ ತಿನ್ನುವ ಅನ್ನಕ್ಕೂ ಸಹ ಅಲ್ಲಿನ ಪ್ರಾಂಶುಪಾಲ ದೇವರಾಜ ಮತ್ತು ವಾರ್ಡನ್ ಗೌಸಿಯಾಬಿ ಕಂಟಕರಾಗಿದ್ದು ಮಕ್ಕಳಿಗೆ ಪ್ರತಿನಿತ್ಯ ಹಳಸಿದ ಅನ್ನ ನೀಡುತ್ತಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಭೇಟಿ ನೀಡಿ, ಪ್ರಾಂಶುಪಾಲ ಮತ್ತು ವಾರ್ಡನ್  ಅವರಿಗೆ ಎಚ್ಚರಿಕೆ ನೀಡಿದ್ದರೂ ಸಹ ಉತ್ತಮ ಆಹಾರ ನೀಡುವಲ್ಲಿ ಶಾಲಾ ಮುಖ್ಯಸ್ಥರು ವಿಫಲವಾಗಿದ್ದಾರೆ.
ತಾಲೂಕು ಪಂಚಾಯಿತಿ ಅಧ್ಯಕ್ಷ ಜಿ.ಟಿ. ತಿಪ್ಪೇಶ್, ಡಿ.10ರಂದು ಶಾಲೆಗೆ ಅನಿರೀಕ್ಷತ ಭೇಟಿ ನೀಡಿದಾಗ ಪ್ರಕರಣ ಬಯಸಿಗೆ ಬಂದಿದ್ದು ಮಕ್ಕಳಿಗೆ ನೀಡುವ ಆಹಾರ ಸಂಪೂರ್ಣ ಕಳಪೆ ಮಟ್ಟದಾಗಿದ್ದು ಮಕ್ಕಳ ಈ ದಯನೀಯ ಪರಿಸ್ಥಿತಿ ಕಂಡ ಅಧ್ಯಕ್ಷರು ಪ್ರಾಂಶುಪಾಲ ಮತ್ತು ವಾರ್ಡನ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ರಾತ್ರಿ ಅನ್ನ ಬೆಳಗಿನ ತಿಂಡಿ: ತರಗತಿಗೆ ತೆರಳಿದ ಅವರು ಮಕ್ಕಳನ್ನು ವಿಚಾರಿಸಿದಾಗ ಈ ಶಾಲೆಯಲ್ಲಿ ಮಕ್ಕಳಿಗೆ ಉತ್ತಮವಾದ ಊಟವಿಲ್ಲ, ಸಮಯಕ್ಕೆ ಸರಿಯಾದ ಸ್ನಾನಕ್ಕೆ ನೀರು ಸಿಗುತ್ತಿಲ್ಲ, ರಾತ್ರಿಯ ಅನ್ನವನ್ನು ಬೆಳಗ್ಗೆ ಬಿಸಿ ಮಾಡಿ ನೀಡುತ್ತಾರೆ. ಸಂಬಾರುಗಳಲ್ಲಿ ತರಕಾರಿ ಹಾಕುವುದಿಲ್ಲ, ಉಪ್ಪು ಖಾರವಿಲ್ಲದ ಊಟ ನೀಡುತ್ತಾರೆಂದು ವಿದ್ಯಾರ್ಥಿಗಳು ಅಧ್ಯಕ್ಷರಿಗೆ ದೂರು ಸಲ್ಲಿಸಿದರು.
ನಂತರ ಮಕ್ಕಳು ಇರುವಂತಹ ವಸತಿಗಳಿಗೆ ಭೇಟಿ ನೀಡಿದ ಅಧ್ಯಕ್ಷರಿಗೆ ಅಲ್ಲಿನ ವಾಸನೆ ಬರುವಂತಹ ಹಾಸನಗಳ ಸ್ವಾಗತಿಸಿದವು. ಅವುಗಳನ್ನು ಕಂಡ ಅಧ್ಯಕ್ಷರು ಅಧಿಕಾರಿಗಳು ವಿರುದ್ಧ ಕಂಡಮಂಡಲರಾದರು.
ಸರ್ಕಾರವು ಕೋಟಿ ಕೋಟಿ ವೆಚ್ಚದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು, ಅಧಿಕಾರಿಗಳ ಅಸಹಕಾರ ಮತ್ತು ಬೇಜವಾಬ್ಧಾರಿತನದಿಂದಾಗಿ ಅವುಗಳ ಅಪಯೋಗ ಕೆಲವರ್ಗಕ್ಕೆ ತಲುಪುತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement