ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸುದ್ದಿ ಸಂಕ್ಷೇಪ

Mainashree
Updated On : 11 Dec 2013, 11:15 am

ಕ್ರೀಡಾಪಟುಗಳಿಗೆ ನಗದು ಬಹುಮಾನ
ಚಿತ್ರದುರ್ಗ: ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಪದಕ ಪಡೆದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ರಾಜ್ಯದ ಅರ್ಹ ಕ್ರೀಡಾಪಟುಗಳಿಗೆ ನಗದು ಬಹುಮಾನಕ್ಕಾಗಿ ಡಿ. 26 ರೊಳಗಾಗಿ ಅರ್ಜಿ ಕರೆಯಲಾಗಿದೆ. 2012 ಜನವರಿಯಿಂದ ಡಿಸೆಂಬರ್‌ವರೆಗೆ ಅಂಗೀಕೃತ ಕ್ರೀಡೆಗಳಲ್ಲಿ ಕರ್ನಾಟಕ ಪ್ರತಿನಿಧಿಸಿ ಪದಕ ಪಡೆದ ಚಿತ್ರದುರ್ಗ ಜಿಲ್ಲೆಯ ಕ್ರೀಡಾಪಟುಗಳು ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಅರ್ಜಿ ಪಡೆದು ಕ್ರೀಡಾ ಸಂಸ್ಥೆಗಳಿಂದ ದೃಢೀಕರಿಸಿದ ದಾಖಲೆ ಸಹಿತ ಸಲ್ಲಿಸಲು ಕೋರಿದೆ.
ಚಿನ್ನದ ಪದಕ ಪಡೆದವರಿಗೆ 1 ಲಕ್ಷ, ಬೆಳ್ಳಿ ಪದಕಕ್ಕೆ 50 ಸಾವಿರ, ಕಂಚಿನ ಪದಕಕ್ಕೆ 25 ಸಾವಿರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸಿ ಭಾಗವಹಿಸಿದ ಕರ್ನಾಟಕದ ಕ್ರೀಡಾಪಟುಗಳಿಗೆ 50 ಸಾವಿರ ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ನಂ. 08194- 235635 ಸಂಪರ್ಕಿಸಲು ಕೋರಿದೆ.
ಉದ್ಯೋಗಾವಕಾಶ
ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ತೇಕಲವಟ್ಟಿ ಗ್ರಾಪಂ ವತಿಯಿಂದ ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ 18 ರಿಂದ 35 ವರ್ಷದೊಳಗಿನ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಲು ವೃತ್ತಿಪರ ಶಿಕ್ಷಣ ಕೌಶಲ್ಯ ತರಬೇತಿ ನೀಡಲು ಅರ್ಜಿ ಕರೆಯಲಾಗಿದೆ. ಆಸಕ್ತ ಯುವಕ, ಯುವತಿಯರು ತೇಕಲವಟ್ಟಿ ಗ್ರಾಪಂ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಅಭಿವೃದ್ಧಿ ಕಾರ್ಯಾಗಾರ
ಚಿತ್ರದುರ್ಗ: ದೇಶದ ಪ್ರಗತಿ ಮತ್ತು ಅದರ ಏಳಿಗೆ ಹಾಗೂ ಸದೃಢ ಸಮಾಜ ಕಟ್ಟುವ ಶಕ್ತಿ ಯುವಜನತೆಯಲ್ಲಿದೆ. ಅದರ ಸದ್ಬಳಕೆಗೆ ಯುವಜನತೆ ಮನಸ್ಸು ಮಾಡಬೇಕಾಗಿದೆ ಎಂದು ಜೋಗೀಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಿ.ಡಿ. ಸೋಮಶೇಖರಪ್ಪ ಹೇಳಿದರು. ಕೇಂದ್ರ ಸರ್ಕಾರದ ನೆಹರು ಯುವಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಗಜೀವನರಾಂ ಯುವಕರ ಸಂಘ ನನ್ನಿವಾಳ ಆಶ್ರಯದಲ್ಲಿ ಜೋಗೀಶ್ವರ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಯುವ ಪ್ರಚಾರಾಂದೋಲನ ಅಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಆದಿವಾಲ ಚಮನ್ ಶರೀಫ್ ಮಾತನಾಡಿ, ಯುವಜನತೆ ದುಶ್ಚಟಗಳಿಂದ ದೂರವಿದ್ದು ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕೆಂದು ಕರೆ ನೀಡಿದರು.  ಉಪನ್ಯಾಸಕರಾದ ವೆಂಟಕೇಶ್, ವೀರೇಶ್, ಪ್ರಕಾಶ್ ಮಾತನಾಡಿದರು. ನೆಹರು ಯುವ ಕೇಂದ್ರದ ಕಾರ್ಯಕರ್ತರಾದ ಎನ್.ಎಂ. ಮಹೇಶ್, ಕಿಶೋರ್, ಪ್ರವೀಣ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement