ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಪರಾಧ ಪತ್ತೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಎಸ್ಪಿ. ದಯಾಳ

Lingaraj Badiger
Updated On : 12 Dec 2013, 10:51 am

ಶಿರಾಳಕೊಪ್ಪ: ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುವದರಿಂದ ಅಪರಾಧಗಳನ್ನು ಪತ್ತೆಹಚ್ಚಲು ಸಹಕಾರಿ ಆಗುತ್ತದೆ ಎಂದು ಶಿವಮೊಗ್ಗ ಜಿಲ್ಲೆಯ ಅಡಿಷನಲ್ ಎಸ್ಪಿ.  ಪಿ.ದಯಾಳ ಹೇಳಿದರು.  ಶಿರಾಳಕೊಪ್ಪ ಹತ್ತಿರದ ಬಳ್ಳಿಗಾವಿ ಯಾತ್ರಿನಿವಾಸದಲ್ಲಿ ಗಡಿ ಅಪರಾಧ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪಕ್ಕದ ಜಿಲ್ಲೆಯಿಂದ ತಕ್ಷಣ ಮಾಹಿತಿ ದೊರೆತರೆ ಅಪರಾಧಿಗಳನ್ನು ಪತ್ತೆಹಚ್ಚಲು ಸಹಕಾರಿ ಆಗಲಿದೆ ಎಂದರು.
 ಗಡಿ ಠಾಣೆಯಲ್ಲಿ ಪತ್ತೆ ಆಗದಿರುವ ಪ್ರಕರಣವನ್ನು ಪರಿಶೀಲಿಸಿ ಕಳ್ಳತನ,ದರೋಡೆ,ಕೊಲೆ,ಇನ್ನೂ ಹಲವಾರು ಅಪರಾಧ ಮಾಡಿ ಬಚ್ಚಿಟ್ಟುಕೊಳ್ಳುವ ಸಾಧ್ಯತೆ ಇರುತ್ತದೆ. ಆಗ ಅಕ್ಕಪಕ್ಕದ ಜಿಲ್ಲೆಯವರು ಮಾಹಿತಿ ಕೊಡುವದರಿಂದ ಅಪರಾಧಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಕೆಲಮೊಮ್ಮೆ ಸುಲಭವಾಗಿ ಪತ್ತೆಹಚ್ಚಬಹುದು ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈಎಸ್ಪಿ ಸಯ್ಯದ್ ಇಸಾಕ್ ವಹಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅಪರಾಧಗಳು ಹೆಚ್ಚಾಗುತ್ತಿದ್ದು, ತಕ್ಷಣ ಮಾಹಿತಿಕೊಡುವದರಿಂದ ಪತ್ತೆಕಾರ್ಯಕ್ಕೆ ಸಹಕಾರಿ ಆಗಲಿದೆ. ಆದ್ದರಿಂದ ಅಕ್ಕಪಕ್ಕದ ಜಿಲ್ಲೆಯ ಅಧಿಕಾರಿಗಳು ಜಾಗೃತರಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.  ಸಭೆಯಲ್ಲಿ ಕಾರವಾರ, ಹಾವೇರಿ, ರಾಣೆಬೆನ್ನೂರ, ದಾವಣಗೆರೆ, ಶಿವಮೊಗ್ಗ ಮತ್ತು ಸಾಗರ ಡಿವೈಎಸ್ಪಿ ಭಾಗವಹಿಸಿ ಮಾಹಿತಿ ವಿನಿಮಯ ಮಾಡಿಕೊಂಡರು. ಸಭೆಯಲ್ಲಿ ವೃತ್ತನಿರೀಕ್ಷಕರು, ಸಬ್ ಇನ್ಸ್‌ಪೆಕ್ಟರ್ ಭಾಗವಹಿಸಿದ್ದರು.

ಅತ್ಯಾಚಾರ ಯತ್ನ: ಗ್ರಾಮ ಲೆಕ್ಕಿಗ ಬಂಧನ
ಶಿರಾಳಕೊಪ್ಪ:  ಶಿರಾಳಕೊಪ್ಪ ಹತ್ತಿರದ ತಾಳಗುಂದ ಗ್ರಾಮ ಲೆಖ್ಖಿಗ ಶರಣಯ್ಯ ಎಂಬುವವನು ವಿಧವೆಯೊಬ್ಬರಿಗೆ ವಿಧವಾ ವೇತನ ಮಾಡಿಸಿಕೊಡುವದಾಗಿ ಹೇಳಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ.
 ಶಿರಾಳಕೊಪ್ಪ ಪಟ್ಟಣದಲ್ಲಿ ರಾತ್ರಿ ವಿಧವೆಯೊಬ್ಬರು ಮನೆಯಲ್ಲಿದ್ದಾಗ ಆಗಮಿಸಿದ ಶರಣಯ್ಯ ಅತ್ಯಾಚಾರ ಮಾಡಲು ಪ್ರಯತ್ನಿಸಿ, ಸಾರ್ವಜನಿಕರಿಂದ  ಧರ್ಮದೇಟು ತಿಂದು ನಂತರ ಪೋಲೀಸರ ಅತಿಥಿಯಾಗಿದ್ದಾನೆ.
 ಮಹಿಳೆ ಕೊಟ್ಟ ದೂರಿನನ್ವಯ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement