ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಮಹೋತ್ಸವ

Lingaraj Badiger
Updated On : 12 Dec 2013, 10:50 am

ಶಿವಮೊಗ್ಗ: ಅಗಜೆ ಸಂಗೀತ ವಿದ್ಯಾಲಯ ನಗರದ ವಿವೇಕಾನಂದ ಬಡಾವಣೆಯ ಶ್ರೀ ನಾಗ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಮಹೋತ್ಸವ ಆಯೋಜಿಸಿತ್ತು.
ಪಾಶ್ಚತ್ಯ ಸಂಗೀತವನ್ನಾಧರಿಸಿ ಕರ್ನಾಟಕ ಸಂಗೀತದಲ್ಲಿ ಮುತ್ತುಸ್ವಾಮಿ ದೀಕ್ಷಿತರು ರಚಿಸಿದ ನೊಟ್ಟು ಸ್ವರಗಳ ಗೋಷ್ಠಿ ಗಾಯನವನ್ನು ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಎಂ.ಯು. ರಾಘವೇಂದ್ರಪ್ರಭು ತಬಲ ಸಹಕಾರ ನೀಡಿದರು.
ನಂತರ ವಿದುಷಿ ಕೃಪಾ ದೀಕ್ಷಿತರು ರಚಿಸಿದ ವಿಶೇಷ ಕೃತಿಗಳನ್ನು ಪ್ರಸ್ತುತಪಡಿಸಿದರು. ವಯೋಲಿನ್‌ನಲ್ಲಿ ವಿದ್ವಾನ್ ಮತ್ತೂರು ಮಧುಮುರಳಿ, ಮೃದಂಗದಲ್ಲಿ ಮೈಸೂರಿನ ವಿದ್ವಾನ್ ಪಿ.ಎಸ್. ಶ್ರೀಧರ್ ಸಹಕಾರ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗುರುಗುಹ ಸಂಗೀತ ಮಹಾವಿದ್ಯಾಲಯದ ಪ್ರಾಂಶುಪಾಲ ವಿ೤ ಶೃಂಗೇರಿ ಎಚ್.ಎಸ್. ನಾಗರಾಜ್, ಮುತ್ತುಸ್ವಾಮಿ ದೀಕ್ಷಿತರು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅವರನ್ನು ಸ್ಮರಿಸುತ್ತಿರುವುದು ಪುಣ್ಯದ ಕೆಲಸವೆಂದರು.
ಅಗಜೆ ಸಂಗೀತ ಮಹಾವಿದ್ಯಾಲಯದ ಅರ್ಪಿತ್ ಶೇಷಾದ್ರಿ, ಅನಶ್ರೀ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement