ಸ್ಪರ್ಧೆಯಿಂದ ಆತ್ಮವಿಸ್ವಾಸ ವೃದ್ಧಿ: ಶಿವಾಜಿ
ಜೋಗ್ಫಾಲ್ಸ್: ವಿವಿಧ ಚಟವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಸುವುದರ ಜೊತೆಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಹೆಚ್ಚಿನ ಮಾಹಿತಿ ಮಾರ್ಗದರ್ಶನ ದೊರೆಯಲು ಸಾಧ್ಯ ಎಂದು ಶರಾವತಿ ಪೋಷಕರ ಸಂಘದ ಅಧ್ಯಕ್ಷ ಕೆ.ಆರ್. ಶಿವಾಜಿ ತಿಳಿಸಿದರು.
ಶರಾವತಿ ಪೋಷಕರ ಸಂಘವು ಶ್ರೀ ಮಹಾಗಣಪತಿ ಸಮುದಾಯ ಭವನದಲ್ಲಿ ಮಕ್ಕಳಿಗೆ ಏರ್ಪಡಿಸಿದ್ದ ಛದ್ಮವೇಷ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಶಿಕ್ಷಕರಾದ ಅನಂತಾಚಾರ್, ಪ್ರೆಸಿಲ್ಲಾ ತೀರ್ಪುಗಾರರಾಗಿ ಆಗಮಿಸಿದ್ದರು. ಸಂಘದ ಸಹ ಕಾರ್ಯದರ್ಶಿ ಮೇಘರಾಜ್, ನಿರ್ದೇಶಕರಾದ ಮುತ್ತಣ್ಣ, ಗಿರೀಶ್, ಚಂದ್ರಪ್ಪ, ಸೋಮಶೇಖರ್, ರಾಘವೇಂದ್ರ, ಪ್ರಕಾಶ್ ಧವಳ ವೇದಿಕೆಯಲ್ಲಿದ್ದರು.
ಕಾರ್ಯದರ್ಶಿ ಬಿ.ತಿಪ್ಪೇಸ್ವಾಮಿ ಸ್ವಾಗತಿಸಿದರು. ಸೋಫಿಯಾ ಮತ್ತು ಕವಿತಾ ನಿರೂಪಿಸಿದರು. ಖಜಾಂಚಿ ಎಸ್. ಉಮೇಶ್ ವಂದಿಸಿದರು.