ಹಿರೇಮಾಗಡಿ ಶಾಲೆಗೆ ಜಿ.ಪಂ. ಅಧ್ಯಕ್ಷೆ ಭೇಟಿ
ಸೊರಬ: ತಾಲೂಕು ಹಿರೇಮಾಗಡಿಯ ಹೆಣ್ಣುಮಕ್ಕಳ ಮೊರಾರ್ಜಿ ವಸತಿ ಶಾಲೆಗೆ ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಹಾಗೂ ಸದಸ್ಯರಾದ ಕೋಮಲಾ ನಿರಂಜನ ದಿಢೀರ್ ಭೇಟಿ ನೀಡಿದರು.
ಶಾಲೆ ಪ್ರಸ್ತುತ ಹಿರೇಮಾಗಡಿ ಮಠದ ಆವರಣದಲ್ಲಿ ನಡೆಯುತ್ತಿದ್ದು, ಮೂಲ ಸೌಕರ್ಯ ಕೊರತೆಯಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರ ಆಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಮುಖ್ಯವಾಗಿ ಕುಡಿಯುವ ನೀರಿನ ಪೂರೈಕೆ ಆಗದಿರುವುದನ್ನು ಗಮನಿಸಿದರು.
ಇನ್ನು ಒಂದು ವಾರದೊಳಗೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಯೊಂದಿಗೆ ಸಮರ್ಪಕ ಮೂಲ ಸೌಕರ್ಯ ಒದಗಿಸಿ, ಕೂಡಲೇ ಸ್ಥಳಾಂತರ ವ್ಯವಸ್ಥೆಗೆ ಏರ್ಪಾಡು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲವಾದಲ್ಲಿ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.