ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎನ್ಸಿಎ ತಂಡಕ್ಕೆ ಎರಡೂ ಪಂದ್ಯಗಳಲ್ಲಿ ಗೆಲವು

Rashmi Kasaragodu
Updated On : 13 Dec 2013, 11:31 am

ಶಿವಮೊಗ್ಗ: ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿರುವ ನಾನ್ ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ತಂಡವು ಗುರುವಾರ ನಗರದ ಜೆಎನ್ಎನ್ ಸಿಇ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶಿವಮೊಗ್ಗ ಕ್ರಿಕೆಟ್ ಅಕಾಡೆಮಿ (ಎಸ್ಸಿಎ) ತಂಡವನ್ನು ಎದುರಿಸಿದ ಎರಡೂ ಪಂದ್ಯದಲ್ಲಿ ಜಯಗಳಿಸಿದೆ.
14 ವರ್ಷದೊಳಗಿನ ಬಾಲಕರ ಈ ಪಂದ್ಯಾವಳಿಯಲ್ಲಿ ಬೆಳಗಿನ ಅವಧಿಯಲ್ಲಿ ನಡೆದ ಸೀಮಿತ 25 ಓವರ್ಗಳ ಪಂದ್ಯದಲ್ಲಿ ಎನ್ಸಿಎ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿತು. ಯಾವುದೇ ವಿಕೆಟ್ ನಷ್ಟವಿಲ್ಲದೇ 136 ರನ್ ಗಳಿಸಿತು. ಈ ತಂಡದ ಎಸ್. ಯಸಿತ್ 70 ಹಾಗೂ ಎಸ್. ಮೋಕ್ಷಾ 29 ರನ್ ಗಳಿಸಿದರು. ಇದಕ್ಕೆ ಪ್ರತಿಯಾಗಿ ಎಸ್ಸಿಎ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 97 ರನ್ಗಳನ್ನಷ್ಟೇ ಗಳಿಸಲು ಶಕ್ಯವಾಯಿತು. ವಿಕಾಸ್ 24 ಹಾಗೂ ಸಂಜಯ್ 14 ರನ್ ಗಳೊಂದಿಗೆ ಗಮನ ಸೆಳೆದರು.
ಮಧ್ಯಾಹ್ನ ನಡೆದ ಸೀಮಿತ 20 ಓವರ್ಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್ಸಿಎ ತಂಡವು ಏಳು ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತು. ಆರ್. ಉಪೇಂದ್ರ 23 ಹಾಗೂ ನಿತಿಶ್ 8 ರನ್ ಗಳಿಸಿದರು. ಕೊಲಂಬೋ ತಂಡದ ದಿಲ್ಲೋನ್ ಅವರು 22 ರನ್ ಗೆ 5 ವಿಕೆಟ್ ಪಡೆದು ತಡೆಯೊಡ್ಡಿದರು.
ಇದಕ್ಕೆ ಪ್ರತಿಯಾಗಿ ಎನ್ಸಿಎ ತಂಡವು ಮೂರು ವಿಕೆಟ್ ನಷ್ಟಕ್ಕೆ 108 ರನ್ ಗಳೊಂದಿಗೆ ಗುರಿ ಮುಟ್ಟಿದೆ. ಹೋಮಲ್ 33 ರನ್ ಗಳೊಂದಿಗೆ ಅಜೇಯರಾಗಿ ಉಳಿದರು.
ಗುರುವಾರ ಹಾಗೂ ಶುಕ್ರವಾರವೂ ಸಹ ಸೀಮಿತ ಓವರ್ಗಳ ನಾಲ್ಕು ಪಂದ್ಯಗಳು ನಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement