ಕೃಷಿ ಋಷಿಗೆ ಅಂತಿಮ ನಮನ
ಶಿವಮೊಗ್ಗ: ಪ್ರಶಾಂತವಾಗಿ ಹರಿಯುತ್ತಿದ್ದ ಕಾನಿಹಳ್ಳದ ದಂಡೆಯ ಮೇಲೆ, ಬಂಧುಗಳು- ಸ್ನೇಹಿತರ ಸಮ್ಮುಖದಲ್ಲಿ ಕೃಷಿ ಋಷಿ ಡಾ. ಡಿ.ಆರ್. ಪ್ರಫುಲ್ಲಚಂದ್ರ ಅವರ ಪಾರ್ಥಿವ ಶರೀರ ಗುರುವಾರ ಬೆಳಗ್ಗೆ 11.30ಕ್ಕೆ ಪಂಚಭೂತಗಳಲ್ಲಿ ಲೀನವಾಯಿತು. ಅವರ ಹಿರಿಯ ಪುತ್ರ ಸವ್ಯಸಾಚಿ ಅವರು ಅಗ್ನಿಸ್ಪರ್ಶ ಮಾಡಿದರು. ಬುಧವಾರ ಬೆಳಗ್ಗೆಯಿಂದ ಗುರುವಾರದವರೆಗೆ ಸಾವಿರಾರು ಅಭಿಮಾನಿಗಳು ಆಗಮಿಸಿ ಪ್ರಫುಲ್ಲಚಂದ್ರ ಅವರ ಅಂತಿಮ ದರ್ಶನ ಪಡೆದರು. ರಾಜ್ಯದ ಮೂರು ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು, ಮಾಜಿ ಡಿಸಿಎಂ ಈಶ್ವರಪ್ಪ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಇತರರು ಅಂತಿಮ ದರ್ಶನ ಪಡೆದರು.