ಕ್ರಿಯಾಯೋಜನೆ ರಚನೆಗೆ ಸಭೆ ಕರೆಯಿರಿ: ಗೋಪಿ
ಕ.ಪ್ರ. ವಾರ್ತೆ ಶಿವಮೊಗ್ಗ ಡಿ.12
ಶಿವಮೊಗ್ಗ ನಗರಸಭೆಗೆ ನಗರೋತ್ಥಾನ ಯೋಜನೆಯಡಿ ನೀಡಲು ಹೊರಟಿರುವ ರು. 100 ಕೋಟಿ ಅನುದಾನಕ್ಕೆ ಸಂಬಂಧಿದಂತೆ ಕ್ರಿಯಾಯೋಜನೆ ರಚಿಸಲು ವಿಶೇಷ ಸರ್ವಸದಸ್ಯರ ಸಭೆಯನ್ನು ಕರೆಯಬೇಕು.
ರಾತ್ರೋರಾತ್ರಿ ತರಾತುರಿಯಲ್ಲಿ ಸಿದ್ಧಪಡಿಸಿ ಜಿಲ್ಲಾ ಉಸ್ತುವಾರಿ ಸಚಿವರ ಸಭೆ ನಡೆಸಿ ಸರ್ಕಾರದ ಅನುಮೋದನೆಗೆ ಕಳುಹಿಸಲು ಮುಂದಾಗಿರುವುದು ಸರಿ ಅಲ್ಲ ಎಂದು ನಗರಸಭಾ ಸದಸ್ಯ, ಕೆಜೆಪಿ ಮುಖಂಡ ಐಡಿಯಲ್ ಗೋಪಿ ಹೇಳಿದ್ದಾರೆ.
ಅಭಿಪ್ರಾಯ ಆಲಿಸಲಿಲ್ಲ: ಭಾರೀ ದೊಡ್ಡ ಮೊತ್ತಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸುವ ಮುನ್ನ, ನಗರಸಭೆ ಅಧಿಕಾರಿಗಳು ನಗರಸಭಾ ಸದಸ್ಯರ ಅಭಿಪ್ರಾಯ ಆಲಿಸುವ ಗೋಜಿಗೆ ಹೋಗಿಲ್ಲ. ಜೊತೆಗೆ ನಗರದ ನಾಗರಿಕರ ಅಭಿಪ್ರಾಯ ಅಹವಾಲು ಆಲಿಸಿಲ್ಲ. ತಮ್ಮಿಷ್ಟಕ್ಕೆ ತಾವು, ತಮಗೆ ಬೇಕಾದ ಯೋಜನೆಗಳಿಗೆ ಅನುದಾನ ನಿಗದಿ ಮಾಡಿಕೊಂಡು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರೋಧಿಯಾಗಿದೆ ಎಂದಿದ್ದಾರೆ.