ಚಿತ್ಪಾವನ ಬ್ರಾಹ್ಮಣ ಸಮಾಜದ ಸಭೆ
ಸೊರಬ: ಚಿತ್ಪಾವನ ಬ್ರಾಹ್ಮಣ ಸಮಾಜದ ವಾರ್ಷಿಕ ಸರ್ವ ಸದಸ್ಯರ ಸಭೆ ಇಲ್ಲಿನ ದತ್ತ ಮಂದಿರದಲ್ಲಿ ನಡೆಯಿತು. ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಮಹೇಶ ಗೋಖಲೆ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಾರದ ಜೋಶಿ, ಕಾರ್ಯದರ್ಶಿಯಾಗಿ ರಾಜು ದಾಮ್ಲೆ ಮತ್ತು ದಿನಕರ ಭಟ್ ಬಾವೆ, ಖಜಾಂಚಿಯಾಗಿ ಕೃಪಾ ಭಾವೆ ಆಯ್ಕೆಯಾದರು. ವೇದಮೂರ್ತಿ ಅಚ್ಯುತ ಭಟ್ ನೇತೃತ್ವದಲ್ಲಿ ಧಾತ್ರಿ ಹವನ ನಡೆಯಿತು. ಶ್ರೀಧರ ಬಾಪಟ್ ವಹಿಸಿದ್ದರು. ಅಚ್ಯುತಭಟ್ ಭಾವೆ, ರಮೇಶ ಬಾಪಟ್, ಮೃತ್ಯುಂಜಯ ಜೋಶಿ, ಎಂ.ಎಂ. ಗೋಖಲೆ, ಗೋಖಲೆ, ಕೀರ್ತಿ ಭಾವೆ, ಶ್ರೀನಾಥ ಮೆಹಂದಳೆ ಇದ್ದರು.