ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಭಾರತದ ಸಾವಯವ ಕೃಷಿ ವಿಶ್ವಕ್ಕೇ ಮಾದರಿ

Rashmi Kasaragodu
Updated On : 13 Dec 2013, 11:30 am

ಕ.ಪ್ರ.ವಾರ್ತೆ ಟಿ ಸಾಗರ ಟಿ  ಡಿ.12
ಭಾರತದ ಸಾವಯವ ಕೃಷಿ ಪದ್ಧತಿ ವಿಶ್ವಕ್ಕೇ ಮಾದರಿಯಾಗಿದೆ ಎಂದು ಅಮೆರಿಕಾದ ನ್ಯೂಚಾಪ್ಟರ್ ಸಂಸ್ಥೆ ಮುಖ್ಯಸ್ಥೆ  ಸಾರಾ ನ್ಯೂಮಾರ್ಕ್ ಹೇಳಿದರು.
ಸಾಗರದ ವನಶ್ರೀ ಶಿಕ್ಷಣ ಸಂಸ್ಥೆಗೆ ಗುರುವಾರ ಭೇಟಿ ನೀಡಿ ಬಚ್ಚೋಡಿಯ ಸಾವಯವ ಕೃಷಿಕರಿಗೆ ಸಸಿಗಳನ್ನು ವಿತರಿಸಿ ಮಾತನಾಡಿದ ಅವರು, ಭಾರತದಲ್ಲಿ ಬೆಳೆಯುವ ತರಕಾರಿ, ದ್ವಿದಳ ಧಾನ್ಯ ಸತ್ವಭರಿತವಾಗಿವೆ. ಇಲ್ಲಿನ ಭೂಮಿಯ ಸಾರ ಶ್ರೇಷ್ಠಮಟ್ಟದ್ದು ಎಂದು ಹೇಳಿದರು.
ಫಲವಂತಿಕೆ: ಭಾರತೀಯ ಕೃಷಿ ಪದ್ಧತಿ ಭೂಮಿಯ ಫಲವಂತಿಕೆಯನ್ನು ಉಳಿಸಿದೆ ಎಂದ ಅವರು ಬಚ್ಚೋಡಿಯಂತಹ ಪ್ರದೇಶದಲ್ಲಿ ವನಶ್ರೀ ಸಂಸ್ಥೆ ವಿವಿಧ ರಾಜ್ಯದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವನಶ್ರೀ ಸಂಸ್ಥಾಪಕ ಎಚ್.ಪಿ. ಮಂಜಪ್ಪ ಮಾತನಾಡಿ, ನಮ್ಮ ಶಾಲೆಯಲ್ಲಿ ಮೇಘಾಲಯ, ಮಿಜೋರಾಂ, ಸಿಕ್ಕಿಂ ಮುಂತಾದ ರಾಜ್ಯಗಳ ವನವಾಸಿ ಮಕ್ಕಳು ಓದುತ್ತಿದ್ದಾರೆ. ಕರ್ನಾಟಕದ ಮಕ್ಕಳ ಜೊತೆಯಲ್ಲಿ ಬೆರೆತು ಅವರು ಕನ್ನಡ ಭಾಷೆ ಓದಲು, ಬರೆಯಲು ಕಲಿತಿದ್ದಾರೆ. ರಾಸಾಯನಿಕ ಗೊಬ್ಬರ ಬಳಸಿ ಇಂದು ಕೃಷಿ ನೀತಿ ಅಧೋಗತಿಗೆ ಹೋಗಿದೆ. ಆದರೆ ವನವಾಸಿಗಳು ಇಂದಿಗೂ ಸಾಂಪ್ರದಾಯಿಕ ಕೃಷಿ ಅನುಸರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಸಸ್ಯಪ್ರಭೇದದಿಂದ ಹೆಸರು; ಹೊಸಗಂದದ ಉಮಾಮಹೇಶ್ವರ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಸಿ.ಎಂ. ನಾರಾಯಣಶಾಸ್ತ್ರಿ, ಕರ್ನಾಟಕದಲ್ಲಿ ಪಶ್ಚಿಮಘಟ್ಟ ಶ್ರೇಣಿ ತನ್ನ ಸಸ್ಯಪ್ರಭೇದದಿಂದ ಹೆಸರುವಾಸಿಯಾಗಿದೆ. ನಮ್ಮ ದೇಶೀಯ ಗಿಡಮೂಲಿಕೆಗಳ ಬಗ್ಗೆ ನಮಗೇ ಅರಿವಿಲ್ಲ. ಮನೆಯಂಗಳದಲ್ಲಿ ಬೆಳೆಯುವ ಹಲವು ಗಿಡಗಳು ದಿವ್ಯ ಔಷಧಿಗೆ ಪೂರಕವಾಗಿದ್ದರೂ ಅವುಗಳ ಬಗ್ಗೆ ನಮಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದು ವಿಷಾದದ ಸಂಗತಿ ಎಂದರು.
ಬಚ್ಚೋಡಿಯ ಸಾವಯವ ಕೃಷಿಕರಿಗೆ ದಾಲ್ಚಿನ್ನಿ, ಜಾಯಿಕಾಯಿ, ಅಶೋಕ, ಅನಂತಮೂಲ, ಅಳಲೆ ಸಸಿಗಳನ್ನು ವಿತರಿಸಲಾಯಿತು.
ಬಾಬ್ಲಿರ್ಲೆ, ಫಲದಾ ಆಗ್ರೋ ರಿಸಚರ್ ಫೌಂಡೇಶನ್ನಿನ ಸೂರ್ಯ ಶಾಸ್ತ್ರಿ, ಉಮೇಶ ಅಡಿಗ, ಮಧ್ವರಾಜ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement