ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರೈತರಿಗೆ ಹಕ್ಕುಗಳ ಬಗ್ಗೆ ಮಾಹಿತಿ ಇಲ್ಲ: ಡಾ. ಮಹದೇವಪ್ಪ

Rashmi Kasaragodu
Updated On : 13 Dec 2013, 11:30 am

ಶಿವಮೊಗ್ಗ: ಇಡೀ ಪ್ರಪಂಚಕ್ಕೆ ಆಹಾರ ಒದಗಿಸುವ ಸಾಮರ್ಥ್ಯ ನಮ್ಮ ದೇಶದ ರೈತರಿಗಿದೆ. ಆದರೆ, ಅವರಿಗೆ ರೈತರ ಹಕ್ಕುಗಳ ಬಗ್ಗೆ ಮಾಹಿತಿ ಇಲ್ಲ ಎಂದು ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಎಂ. ಮಹದೇವಪ್ಪ ಅಭಿಪ್ರಾಯಪಟ್ಟರು.
ನಗರದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ-2001ರ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಅಗತ್ಯವಾದಂತಹ ಮಾಹಿತಿಯನ್ನು ಸಕಾಲಕ್ಕೆ ತಲುಪಿಸುವ ಕೆಲಸ ಮಾಡಬೇಕು. ಅಲ್ಲದೇ ರೈತರಿಗೆ ಬೆಳೆಗಳನ್ನು ಸಂರಕ್ಷಿಸುವ ವಿಧಾನ, ಮಾರುಕಟ್ಟೆ ವ್ಯವಸ್ಥೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಭಾರತದ ಹವಾಮಾನ ಮತ್ತು ಪ್ರಾಕೃತಿಕ ಸಂಪತ್ತು ಕೃಷಿಗೆ ಅತ್ಯಂತ ಪೂರಕವಾಗಿದೆ. ಇಲ್ಲಿ ಯಾವುದೇ ತಳಿಯನ್ನು ಅಭಿವೃದ್ಧಿಪಡಿಸಬಹುದಾದ ಹವಾಮಾನವಿದೆ. ಅದರಲ್ಲೂ ವಿಶಿಷ್ಟವಾಗಿ ರಾಜ್ಯದಲ್ಲಿ ವೈವಿಧ್ಯಮಯ ತಳಿ ಬೆಳೆಯುವ ಹವಾಮಾನವಿದ್ದು, ರೈತರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕೃಷಿ ಮತ್ತು ತೋಟಗಾರಿಕಾ ವಿಶೇಷಾಧಿಕಾರಿ ಡಾ. ಪಿ.ಎಂ. ಸಾಲಿಮಠ್, ಜಂಟಿ ನಿರ್ದೇಶಕ ಮಧುಸೂಧನ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement