ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿಹಿಂಪ ಮುಖಂಡರ ಕಗ್ಗೊಲೆ: ಪ್ರತಿಭಟನೆ

Rashmi Kasaragodu
Updated On : 13 Dec 2013, 11:31 am

ಕ.ಪ್ರ. ವಾರ್ತೆ     ಶಿವಮೊಗ್ಗ     ಡಿ.12
ವಿಶ್ವ ಹಿಂದೂ ಪರಿಷತ್ ಮುಖಂಡರ ಕಗ್ಗೊಲೆ ಖಂಡಿಸಿ ವಿಹಿಂಪ ಜಿಲ್ಲಾ ಶಾಖೆಯ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮನವಿ ಅರ್ಪಿಸಿದರು.
ಉತ್ತರ ಪ್ರದೇಶ ಅಂಬೇಡ್ಕರ್ ನಗರ ಜಿಲ್ಲೆಯ ತಾಂಡದಲ್ಲಿ ವಿಶ್ವ ಹಿಂದೂ ಪರಿಷತ್ ನಾಯಕರಾದ ರಾಮಮೋಹನ್ ಗುಪ್ತಾ ಅವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಅದೇ ರೀತಿ ಗುಜರಾತಿನ ಅಮೇಲಿ ಜಿಲ್ಲೆಯ ಮತ್ತೊಬ್ಬ ವಿಶ್ವಹಿಂದೂ ಪರಿಷತ್ ನಾಯಕ ಅಜಿತ್ ಖುಮನ್ ಹಾಗೂ ಅವರ ಸೋಹದ ಭರತ್ ಖುಮನ್ ಇಬ್ಬರನ್ನೂ ಅಮಾನುಷವಾಗಿ ಕೊಲೆಗೈಯಲಾಗಿದೆ. ಈ ಹಂತಕರನ್ನು ಕೂಡಲೇ ಬಂಧಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ ವಿಹಿಂಪ ಜಿಲ್ಲಾ ಮುಖಂಡರು, ಉತ್ತರ ಪ್ರದೇಶ ಹಾಗೂ ಗುಜರಾತಿನ ರಾಜ್ಯ ಸರ್ಕಾರಗಳನ್ನು ಈ ಮೂಲಕ ಒತ್ತಾಯಿಸುತ್ತಿರುವುದಾಗಿ ತಿಳಿಸಿದರು.
ಸಾಮಾಜಿಕ ಕಳಕಳಿ ಹೊಂದಿದ ವಿಹಿಂಪ ನಾಯಕರನ್ನು ಅಮಾನುಷವಾಗಿ ಕೊಲೆಗೈಯುತ್ತಿರುವುದು ಖಂಡನೀಯ. ನಾಯಕರನ್ನು ಕೊಲೆಗೈಯುವ ಮೂಲಕ ಹಿಂದೂ ಸಮಾಜವನ್ನು ಅಭದ್ರಗೊಳಿಸುವ ಕಾರ್ಯಕ್ಕೆ ಕೆಲವು ದುಷ್ಕರ್ಮಿಗಳು ಕೈಹಾಕಿದ್ದಾರೆ ಎಂದು ಟೀಕಿಸಿದರು.
ಜಿಲ್ಲಾಡಳಿತಕ್ಕೆ ಮನವಿ ನೀಡುವ ಸಂದರ್ಭದಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ರಮೇಶ್ಬಾಬು, ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ನಟರಾಜ್, ನಗರ ಅಧ್ಯಕ್ಷ ಶಾಮರಾವ್ ಶಿರ್ಕೆ, ಕಾರ್ಯದರ್ಶಿ ನಾರಾಯಣ ಜಿ.ವರ್ಣೇಕರ್, ಬಜರಂಗದಳ ಜಿಲ್ಲಾ ಸಂಚಾಲಕ ದೀನದಯಾಳು ಮತ್ತಿತರರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement