16ರಂದು ದತ್ತ ಜಯಂತಿ
ಶಿವಮೊಗ್ಗ: ನಗರದ ಭಗವಾನ್ ಆಶ್ರಮದಲ್ಲಿ ದತ್ತ ಜಯಂತಿ ಆಚರಿಸಲಾಗುತ್ತಿದ್ದು, ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ನಿತ್ಯ ಬೆಳಿಗ್ಗೆ ಸದ್ಗುರುಗಳಿಗೆ ರುದ್ರಾಭಿಷೇಕ, ಗುರುಚರಿತ್ರೆ ಪಾರಾಯಣ ಸಂಜೆ ಭಜನೆ ಹಾಗೂ ಅಷ್ಟಾವಧಾನ ಸೇವೆ ನಡೆಯಲಿದೆ. ಡಿ.16ರಂದು ಬೆಳಿಗ್ಗೆ 10ಕ್ಕೆ ಸತ್ಯನಾರಾಯಣ ಪೂಜೆ, ಗಣಪತಿ ಹೋಮ ನೆರವೇರುವುದು. ಡಿ.17ರಂದು ಬೆಳಿಗ್ಗೆ 8ಗಂಟೆಗೆ ದತ್ತಮಾಲ ಮಂತ್ರ ಹೋಮ, ಮಹಾ ಮಂಗಳರಾತಿ ನಡೆಯುವುದು. ಈ ಎಲ್ಲಾ ಕಾರ್ಯಕ್ರಮಗಳ ಸಾನ್ನಿಧ್ಯವನ್ನು ಅಗಡಿ ಮಠದ ಗುರುದತ್ತಮೂರ್ತಿ ಚಕ್ರವರ್ತಿಗಳು ವಹಿಸುವರು. ಭಕ್ತಾಧಿಗಳು ಪಾಲ್ಗೊಳ್ಳುವಂತೆ ಆಶ್ರಮದ ಅರ್ಚಕರು ಕೋರಿದ್ದಾರೆ.