ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಾಶ್ಚಾತ್ಯ ಸಂಸ್ಕೃತಿ ಯುವ ಜನತೆಗೆ ಮಾರಕ

Rashmi Kasaragodu
Updated On : 14 Dec 2013, 10:28 am

ಸೊರಬ: ವೇಗವಾಗಿ ಹಬ್ಬುತ್ತಿರುವ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಯುವಜನತೆಯ ವಿಚಾರಗಳನ್ನು ಕೆಡಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ತಾಯಿ, ಪತ್ನಿ, ಮಗಳು ಅಥವಾ ಸಹೋದರಿಯ ರೂಪದಲ್ಲಿನ ಹೆಣ್ಣಿನ ಬಾಂಧವ್ಯ ಹಳಸುತ್ತಿರುವುದಕ್ಕೆ ಇದೇ ಕಾರಣ ಎಂದು ಸಮಾಜ ಸೇವಕಿ ಶೇಖರಮ್ಮ ರಾಜಪ್ಪ ಮಾಸ್ತರ್ ಅಭಿಪ್ರಾಯಪಟ್ಟರು.
ಪಟ್ಟಣದ ದಾರುಸ್ಸಲಾಂ ಶಾದಿಮಹಲ್ನಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ ವತಿಯಿಂದ ಘನತೆ- ನನ್ನ ಹಕ್ಕು- ನನ್ನ ಹೊಣೆಗಾರಿಕೆ ಎಂಬ ವಿಷಯವಾಗಿ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಅಬಲೆಯಲ್ಲ ಸಬಲೆ: ಸ್ತ್ರೀಯರು ಹೆಚ್ಚಿನ ವಿದ್ಯೆ ಗಳಿಸಿ, ಉನ್ನತ ಸ್ಥಾನ ಪಡೆದಾಗ ಸಮಾಜ ಅವಳಿಗೆ ಘನತೆ, ಗೌರವ ನೀಡುತ್ತದೆ. ಎಂದ ಅವರು, ಈ ದಿನಗಳಲ್ಲಿ ಮಹಿಳೆ ಇನ್ನಷ್ಟು ಉನ್ನತ ಶಿಕ್ಷಣ ಪಡೆಯುವುದರ ಮೂಲಕ ತಾನು ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಬೀತುಪಡಿಸಬೇಕಿದೆ ಎಂದರು.
ಬ್ರಹ್ಮಕುಮಾರಿ ಚೇತನಾ ಉಪಸ್ಥಿತರಿದ್ದರು. ನಾಝಿಮಾ, ಬೀಬಿ ಆಯಿಶಾ, ಸಮೀನಾ, ಅಫ್ಸಾನ, ತಹ್ಸೀನಾ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement