ಮೀನಾಕ್ಷಮ್ಮ ಅಂತ್ಯಕ್ರಿಯೆ
ಸೊರಬ : ಆರ್ಎಸ್ಎಸ್ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ತಾಯಿ ಮೀನಾಕ್ಷಮ್ಮ ಶೇಷಗಿರಿಯಪ್ಪ ಹೊಸಬಾಳೆ ಅವರ ಅಂತ್ಯ ಸಂಸ್ಕಾರ ಶುಕ್ರವಾರ ಪಟ್ಟಣದ ರುದ್ರಭೂಮಿಯಲ್ಲಿ ಜರುಗಿತು.
ವಿಪ ಸದಸ್ಯ ಪಿ.ವಿ.ಕೃಷ್ಣಭಟ್, ಮಾಜಿ ಶಾಸಕ ಬಿ.ಸಿ.ನಾಗೇಶ್, ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಗಿರೀಶ್ ಪಾಟೀಲ್, ಜಿಪಂ ಸದಸ್ಯ ಹುನವಳ್ಳಿ ಗಂಗಾಧರಪ್ಪ ಅಂತ್ಯ ಸಂಸ್ಕಾರದ ವೇಳೆ ಆಗಮಿಸಿದ್ದರು. ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕಟ್ಟಿನಕೆರೆ ಸೀತಾರಾಮಣ್ಣ, ವಿವಿಧ ಸಂಘಸಂಸ್ಥೆ, ಪಟ್ಟಣ ಪ್ರಮುಖರು, ವಿಪ್ರ ಬಾಂಧವ, ಬಂಧು, ಬಳಗ, ಆಪ್ತೇಷ್ಟರು ಪಾಲ್ಗೊಂಡಿದ್ದರು.
ಶೋಕ ಸಂದೇಶ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜಾನಾಥ್ ಸಿಂಗ್, ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಅರುಣ ಜೈಟ್ಲಿ, ಬಿಹಾರದ ಮಾಜಿ ಮುಖ್ಯಮಂತ್ರಿ ಸುಶೀತ್ ಮೋದಿ, ಆರ್ಎಸ್ಎಸ್ ಪ್ರಮುಖರಾದ ಮೋಹನ್ ಭಾಗವತ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ದಿನೇಶ್ ಜೋಷಿ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಶೋಕ ವ್ಯಕ್ತಪಡಿಸಿದ್ದಾರೆ.ೈ