ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸುದ್ದಿ ಸಂಕ್ಷೇಪ

Mainashree
Updated On : 15 Dec 2013, 10:46 am

ಇಂದು ಉಚಿತ ಹೀಲಿಂಗ್ ಶಿಬಿರ
ಶಿವಮೊಗ್ಗ:  ಕರ್ನಾಟಕ ಬ್ಯಾಟರೀಸ್ ಮತ್ತು ಯೋಗಾಂಜಲಿ ಡಿವೈನ್ ಹೀಲಿಂಗ್ ಸೆಂಟರ್ ವಿನೋಬನಗರದ ಸಂಜೀವಿನಿ ಹಾಲ್‌ನಲ್ಲಿ ಡಿ.15ರಂದು ಬೆಳಗ್ಗೆ 10 ಗಂಟೆಗೆ ಉಚಿತ ಹೀಲಿಂಗ್ ಮತ್ತು ಶಿಬಿರವನ್ನು ಆಯೋಜಿಸಿದೆ. ಮಾನಸಿಕ ಸಮಸ್ಯೆಗಳಾದ ಮಾನಸಿಕ ಒತ್ತಡ, ಭಯ, ಖಿನ್ನತೆ, ನಕಾರತ್ಮಕ ಆಲೋಚನೆಗಳಿಂದ ಹೊರಬರಲು ಹಾಗೂ ಆತ್ಮವಿಶ್ವಾಸವೃದ್ಧಿಸಲು ಶಿಬಿರ ಸಹಕಾರಿ ಆಗಲಿದೆ ಎಂದು ಯೋಗಾಂಜಲಿ ಸಂಸ್ಥೆಯ ಶಶಿಧರ್ ತಿಳಿಸಿದ್ದಾರೆ. ವಿವರಗಳಿಗೆ 8884251298 ಸಂಪರ್ಕಿಸಿ.
ಪದಾಧಿಕಾರಿಗಳ ಆಯ್ಕೆ
ಶಿವಮೊಗ್ಗ:  ಜಿಲ್ಲಾ ಪಟಾಕಿ ವರ್ತಕರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷ ಕೆ.ಎಚ್. ಜ್ಞಾನೇಶ್ವರಪ್ಪ, ಅಧ್ಯಕ್ಷರಾಗಿ ಜಿ.ಕೆ. ಮಾಧವಮೂರ್ತಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ವೈ.ಎಸ್. ಕುಮಾರ್, ಆರ್. ಗೋಪಿನಾಥ್ ಶ್ರೇಷ್ಠಿ, ಕೆ.ವಿ. ಮಹಾರುದ್ರ, ಲಿಂಗೇಶ್, ಎಚ್.ಎಂ. ರಮೇಶ್, ರಾಘವೇಂದ್ರರಾವ್, ಪ್ರಧಾನ ಕಾರ್ಯದರ್ಶಿಯಾಗಿ ಎಲ್.ನಾಗಮಂಜು, ಸಹಕಾರ್ಯದರ್ಶಿ ನಾಗರಾಜ್, ಕೃಷ್ಣಮೂರ್ತಿ, ಖಜಾಂಚಿ ಎಚ್.ವಿ. ಸದಾಶಿವ ಶ್ರೇಷ್ಠಿ ನೇಮಕವಾಗಿದ್ದಾರೆ. ಸಲಹಾ ಸಮಿತಿಗೆ ನಿಜಲಿಂಗಪ್ಪ, ಪಿ. ಮಂಜುನಾಥ, ಲಕ್ಷ್ಮೀನಾರಾಯಣ, ಕೆ.ವಿ. ಸದಾಶಿವ, ಪರಮೇಶ್ವರಪ್ಪ, ಎಸ್.ಪಿ. ಶಶಿಧರ, ಸಾಧನ, ಸಿದ್ದಯ್ಯ ಆಯ್ಕೆಯಾಗಿದ್ದಾರೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement