ಮಾಸ್ತಿಕಟ್ಟೆ ಕೆಪಿಸಿ ಉಳಿಸಿ ಹೋರಾಟ ಸಮಿತಿ ರಚನೆ
ಹೊಸನಗರ: ಮಾಸ್ತಿಕಟ್ಟೆಯಿಂದ ಕೆಪಿಸಿಯನ್ನು ಅವೈಜ್ಞಾನಿಕವಾಗಿ ಸ್ಥಳಾಂತರಿಸಿರುವುದು ವಿರೋಧಿಸಿ, ಸ್ಥಳಾಂತರ ರದ್ದುಗೊಳಿಸುವಂತೆ ಹೋರಾಟ ಮಾಡುವ ನಿಟ್ಟಿನಲ್ಲಿ ಗ್ರಾಮಸ್ಥರು ಸಮಿತಿ ರಚನೆ ಮಾಡಿದ್ದಾರೆ.
ಗ್ರಾಮಸ್ಥರ ಉಪಸ್ಥಿತಿಯಲ್ಲಿ ರಚನೆಗೊಂದ ಮಾಸ್ತಿಕಟ್ಟೆ ನಾಗರೀಕರ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿ ಎಸ್.ಕೆ.ಗೋಪಾಲ್, ಗೌರವಾಧ್ಯಕ್ಷರಾಗಿ ಜಿ.ವೈ.ರವಿ, ಉಪಾಧ್ಯಕ್ಷರಾಗಿ ರವೀಂದ್ರಪ್ರಭು, ಎಸ್.ಮಹೇಶ್, ಪ್ರಧಾನ ಕಾರ್ಯದರ್ಶಿ ಅನಂತಮೂರ್ತಿ ಶೆಣೈ, ಖಜಾಂಚಿ ಜಿ.ಪ್ರಕಾಶ್, ನಿರ್ದೇಶಕರಾಗಿ ಸುರೇಶ್ಭ್ಟ್, ಅನಿಲಕುಮಾರ್, ಸಜೀಶ್, ಎಸ್.ಎಂ.ಸುರೇಶಕುಮಾರ್, ಹೆಚ್. ವಾಸಪ್ಪ, ಸುನೀಲಕುಮಾರ್, ಬಿ.ಎ.ಉಮೇಶ್, ಕೆ.ಲೋಕಪ್ಪ, ಗ್ರಾಪಂ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಆಯ್ಕೆಯಾಗಿದ್ದಾರೆ.