ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಿವಪ್ಪನಾಯಕನ ತೆರಿಗೆ ನೀತಿ ಇಂದಿಗೂ ಪ್ರಸ್ತುತ

Lingaraj Badiger
Updated On : 16 Dec 2013, 10:39 am

ಸಾಗರ: ಕೃಷಿಗೆ ಸಂಬಂಧಿಸಿದಂತೆ ಕೆಳದಿಯ ಶಿವಪ್ಪನಾಯಕನ ತೆರಿಗೆ ನೀತಿ ಇಂದಿಗೂ ಪ್ರಸ್ತುತ ಎಂದು ಚಿತ್ರದುರ್ಗದ ಇತಿಹಾಸ ಸಂಶೋಧಕ ಡಾ. ಬಿ.ರಾಜಶೇಖರಪ್ಪ ಹೇಳಿದರು.
ತಾಲೂಕಿನ ಕೆಳದಿಯಲ್ಲಿ ರಾಜ್ಯ ಸರ್ಕಾರ ಭಾನುವಾರ ಆಯೋಜಿಸಿದ್ದ ಕೆಳದಿ ಉತ್ಸವದ ವಿಚಾರ ಗೋಷ್ಠಿಯಲ್ಲಿ ಕೆಳದಿ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ ಕುರಿತು ವಿಚಾರ ಮಂಡಿಸಿದ ಅವರು, ಶಿವಪ್ಪನಾಯಕ ಭೂಮಿಯ ಫಲವತ್ತತೆ, ನೀರಾವರಿ, ಮಳೆಯ ಸ್ಥಿತಿಗತಿಗಳನ್ನು ಆಧರಿಸಿ ಬೆಳೆಗೆ ತೆರಿಗೆ ವಿಧಿಸುತ್ತಿದ್ದ ಕ್ರಮ ವೈಜ್ಞಾನಿಕವಾಗಿತ್ತು ಎಂದು ಅಭಿಪ್ರಾಯಪಟ್ಟರು.
ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ, ರಾಜ್ಯಾಡಳಿತಗಳಲ್ಲಿ ಶ್ರಮಿಕರ ದಾಖಲೆಗಳ ಕಡೆಗಣನೆಯಾಗುವ ಸಂಪ್ರದಾಯವನ್ನು ಕೆಳದಿ ರಾಜರ ಕಾಲದಲ್ಲಿ ತುಸು ಮುರಿದಿರುವುದು ಕಂಡುಬರುತ್ತದೆ. ಜನಪದೀಯ ಆಚರಣೆಗಳ ಮೂಲಕ ಇತಿಹಾಸವನ್ನು ಸ್ಮರಿಸಲಾಗುತ್ತಿದೆ. ಈ ದಿಸೆಯಲ್ಲಿ ಇನ್ನಷ್ಟು ಅಧ್ಯಯನ ನಡೆಸಲು ಇಲ್ಲಿನ ಪ್ರತಿ ಊರಿನ ಸ್ಥಳನಾಮಗಳ ಕುರಿತು ಸಂಶೋಧಕರು ಬೆಳಕು ಚೆಲ್ಲಬೇಕು ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯಕ್ಕೆ ಪ್ರೋತ್ಸಾಹ: ಕೆಳದಿ ಕಾಲದ ಸಾಹಿತ್ಯ  ಕುರಿತು ಮಾತನಾಡಿದ ತುಮಕೂರಿನ ಇತಿಹಾಸ ವಿದ್ವಾಂಸ ಡಾ.ಬಿ.ನಂಜುಂಡಸ್ವಾಮಿ, ಕೆಳದಿಯ ವೆಂಕಟಪ್ಪ ನಾಯಕರ ಕಾಲದಲ್ಲಿ ಸಾಹಿತ್ಯಕ್ಕೆ ಉನ್ನತ ಪ್ರೋತ್ಸಾಹ ಸಿಕ್ಕಿತ್ತು ಎಂದರು.
ಚಿಂತಕ ದೇವೇಂದ್ರ ಬೆಳೆಯೂರು ಪ್ರತಿಕ್ರಿಯಿಸಿ, ಇತಿಹಾಸ ಅಧ್ಯಯನ ವಿಶಾಲ ನೆಲೆಯಲ್ಲಿ ನಡೆಯುತ್ತಿದ್ದು, ಇವು ಎಷ್ಟೋ ಕುತೂಹಲಕಾರಿ ವಿಚಾರಗಳತ್ತ ಬೆಳಕು ಚೆಲ್ಲುವುದಿಲ್ಲ ಎಂದರು.
ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡರೆಡ್‌ಡಿ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement