ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಹಾರ ನಿಗಮಕ್ಕೆ ಹಾನಿ: ಕ್ರಮಕ್ಕೆ ಆಗ್ರಹ

Lingaraj Badiger
Updated On : 17 Dec 2013, 10:49 am

ಶಿವಮೊಗ್ಗ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ 15 ಕೋಟಿಗೂ ಹೆಚ್ಚು ನಷ್ಟವಾಗಲು ಕಾರಣರಾದ ಅಧಿಕಾರಿಗಳು ಮತ್ತು ದಾಸ್ತಾನು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನಸ್ಪಂದನ ವೇದಿಕೆ ರಾಜ್ಯ ಸಂಚಾಲಕ ಬಿ.ಆರ್. ಮನೋಹರ ಗೌಡ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2011- 12ರಲ್ಲಿ ಸರ್ಕಾರದ ಬೆಂಬಲ ಬೆಲೆಯಡಿ ಬತ್ತ ಖರೀದಿ ಸಂಗ್ರಹದಲ್ಲಿ ಸುಮಾರು 90 ಸಾವಿರ ಕ್ವಿಂಟಲ್ ಬತ್ತ ದಾಸ್ತಾನು ಕೊರತೆಯಲ್ಲಿ 15 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ನಿಗಮದ ಖರೀದಿ ಉಸ್ತುವಾರಿ ಅಧಿಕಾರಿ ದಾಸ್ತಾನು ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆ. ಇದು ಆಡಿಟ್ ರಿಪೋರ್ಟ್‌ನಲ್ಲಿ ಸಾಬಿತಾಗಿದೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆ ಕೇವಲ ನ್ಯಾಯಬೆಲೆ ಅಂಗಡಿ ಮತ್ತು ರೈಸ್‌ಮಿಲ್‌ಗಳ ಭಾಗ್ಯವಾಗಿದೆ ಎಂದು ಟೀಕಿಸಿದರು.
ವೇದಿಕೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶ್ರೀಲತಾ ಶೆಟ್ಟಿ, ಜಿಲ್ಲಾಧ್ಯಕ್ಷ ಎನ್. ಮಹೇಶ್ವರಪ್ಪ, ಸರಸ್ವತಿ ಭಾಸ್ಕರ್, ಉದಯಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement