ಕಾರ್ಮಿಕರ ಮೇಲೆ ದೌರ್ಜನ್ಯ; ಆರೋಪ
ಶಿವಮೊಗ್ಗ: ನಗರದ ಓ.ಟಿ. ರಸ್ತೆಯಲ್ಲಿರುವ ಲಕ್ಷ್ಮೀ ಟ್ರ್ಯಾಕ್ಟರ್ ಸಂಸ್ಥೆಯಲ್ಲಿ ಮಾಲೀಕರಿಂದ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಸೋಮವಾರ ಟ್ರ್ಯಾಕ್ಟರ್ ಶೋ ರೂಂ ಎದುರು ಕರ್ನಾಟಕ ರಕ್ಷಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂಸ್ಥೆಯಲ್ಲಿ ಕಾರ್ಮಿಕರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, 8-10 ವರ್ಷ ಕೆಲಸ ಮಾಡಿದ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಕಾರ್ಮಿಕರು ಕೆಲಸ ಬಿಟ್ಟ ಮೇಲೆ ಅವರಿಗೆ ಸಿಗಬೇಕಾದ ಪಿಎಫ್ ಹಣ ಪಡೆಯಲು ಹೋದರೆ, ಭವಿಷ್ಯನಿಧಿ ಕಚೇರಿಯಲ್ಲಿ ಕಾರ್ಮಿಕರ ಪಿಎಫ್ ಹಣವನ್ನೇ ತುಂಬಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಟ್ರ್ಯಾಕ್ಟರ್ ಕೊಳ್ಳಲು ಬಂದ ರೈತರನ್ನು ವಂಚಿಸಿ, ಕಳಪೆ ಎಂಜಿನ್ ಮತ್ತು ಟೈರ್ ನೀಡುತ್ತಿದ್ದಾರೆ. ಕೂಡಲೇ ಕಾರ್ಮಿಕರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು. ಕಾರ್ಮಿಕರಿಗೆ ಬರಬೇಕಾದ ಸೌಲಭ್ಯ ದೊರಕಿಸಿಕೊಡಬೇಕು ಎಂದು ಕಾರ್ಮಿಕ ಅಧಿಕಾರಿಗಳಿಗೆ ಇದೇ ವೇಳೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು ಇದ್ದರು.