ಬಾಲಕಾರ್ಮಿಕ ಪದ್ಧತಿ ನಿವಾರಣೆಗೆ ವರ್ತಕರ ಸಹಕಾರ ಅವಶ್ಯ: ನ್ಯಾ.ಅನಿತಾ
ಸೊರಬ: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ನಿಟ್ಟಿನಲ್ಲಿ ವರ್ತಕರ ಸಹಕಾರ ಅಗತ್ಯವಿದೆ ಎಂದು ನ್ಯಾ. ಜಿ. ಅನಿತಾ ತಿಳಿಸಿದರು.
ತಾಲೂಕು ಆನವಟ್ಟಿಯ ವಿಶ್ವಭಾರತಿ ಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ವರ್ತಕರ ಸಂಘ ಹಾಗೂ ವಿಶ್ವಭಾರತಿ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು- ನೆರವು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲರಾದ ಇಂದುಧರ ಒಡೆಯರ್, ವೈ.ಜಿ. ಪುಟ್ಟಸ್ವಾಮಿ, ಸುಧಾಕರ ಪಿ. ನಾಯ್ಕ, ನಾಗರಾಜ್ ಕ್ರಮವಾಗಿ ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕು, ಗ್ರಾಹಕರ ಹಕ್ಕು ಕಾಯಿದೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯಿದೆ. ಜನನ, ಮರಣ ಕಾಯಿದೆ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ತಮ್ಮಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಡಿ. ಮಾಂಗಲಿ, ಪಿಎಸ್‌ಐ ಜಗನ್ನಾಥ್, ವರ್ತಕರ ಸಂಘದ ಉಪಾಧ್ಯಕ್ಷ ಬಸವರಾಜ್ ಹಾವೇರಿ, ವಿಶ್ವಭಾರತಿ ಟ್ರಸ್ಟ್ ಕಾರ್ಯದರ್ಶಿ ಸಂಜಯ್ ಡೋಂಗ್ರೆ, ವರ್ತಕರು ಮತ್ತಿತರರು ಇದ್ದರು.
ವಿದ್ಯಾ, ವೈಷ್ಣವಿ ಪ್ರಾರ್ಥಿಸಿದರು. ವಿಜಯ್ ಟೇಂಬೆ ಸ್ವಾಗತಿಸಿದರು. ರುದ್ರಪ್ಪ ವಕೀಲ್ ನಿರೂಪಿಸಿದರು.