ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಯಂತ್ರ ಬಳಕೆಯಿಂದ ಶ್ರಮ ಸಂಸ್ಕ ೃತಿ ಮಾಯ: ಪ್ರಸನ್ನ

Lingaraj Badiger
Updated On : 17 Dec 2013, 10:48 am

ಸಾಗರ: ಆಧುನಿಕತೆಯ ಈ ಹೊತ್ತಿನಲ್ಲಿ ಶ್ರಮ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕಲೆಗಳು ವಸ್ತುಸಂಗ್ರಹಾಲಯದಲ್ಲಿಡುವ ಅಧ್ಯಯನ ವಸ್ತುವಾಗಿ ಉಳಿಯುತ್ತಿರುವುದಕ್ಕೆ ರಂಗಕರ್ಮಿ ಪ್ರಸನ್ನ ವಿಷಾದ ವ್ಯಕ್ತಪಡಿಸಿದರು.
ತಾಲ್ಲೂಕಿನ ಕೆಳದಿಯಲ್ಲಿ ಭಾನುವಾರ ನಡೆದ ಕೆಳದಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂತಹ ಉತ್ಸವಗಳಲ್ಲಿ ದೇಶೀಯ ಕಲೆಗಳು ಅನಾವರಣಗೊಳ್ಳಬೇಕು ಎಂದರು.
ಯಂತ್ರಗಳ ಅತಿಯಾದ ಬಳಕೆಯಿಂದ ಶ್ರಮಸಂಸ್ಕೃತಿ ನಮ್ಮಿಂದ ಮಾಯವಾಗುತ್ತಿದೆ. ಯಂತ್ರಗಳ ಅತಿಯಾದ ಅವಲಂಬನೆಯಿಂದ ಬದುಕಿನ ಸೈದ್ಧಾಂತಿಕ ನೆಲೆಗಟ್ಟನ್ನೇ ಮರೆಯುತ್ತಿದ್ದೇವೆ. ಈ ಮೂಲಕ ಶ್ರಮಸಂಸ್ಕೃತಿಯನ್ನು ಕಡೆಗಣಿಸುತ್ತಿದ್ದೇವೆ. ಇದು ಸಲ್ಲ ಎಂದು ಹೇಳಿದರು.
ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮಾತನಾಡಿ, ದೇಶೀಯ ಕಲೆಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಯುವಜನಾಂಗ ಪ್ರಯತ್ನ ಮಾಡುತ್ತಿದೆ ಎಂಬುದಕ್ಕೆ ಕೆಳದಿ ಉತ್ಸವವೇ ಸಾಕ್ಷಿಯಾಗಿ ನಿಲ್ಲುತ್ತದೆ. ಅಧಿಕಾರಿಗಳು ಹಾಗೂ ಸಾರ್ವಜನಿಕರ ಸ್ಪಂದನದಿಂದ ಉತ್ಸವ ಯಶಸ್ವಿಯಾಗಿ ನಡೆದಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕೆಳದಿ ರಾಜಗುರು ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು, ಗ್ರಾಮೀಣರಲ್ಲಿ ನೆಲಮೂಲ ಕಲೆ ಹಾಸುಹೊಕ್ಕಾಗಿ ಬೆಳೆದುಬಂದಿದೆ. ರೈತ ಸಮುದಾಯ ಜನಪದ ಕಲೆಗಳನ್ನು ಬಹು ಹಿಂದಿನಿಂದಲೂ ಮೈಗೂಡಿಸಿಕೊಂಡು ಬಂದಿದ್ದಾರೆ.  ನೆತ್ತಿ ಹಸಿವು ಅವರಿಗೆ ಎಲ್ಲವನ್ನೂ ಕಲಿಸಿದೆ ಎಂದರು.
ಇತಿಹಾಸ ಸಂಶೋಧಕ ಡಾ.ಗುಂಡಾಜೋಯ್ಸ್ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತರಾದರಿಗೆ ಬಹುಮಾನ ವಿತರಿಸಿದರು. ಉತ್ಸವದ ಯಶಸ್ಸಿನ ಪ್ರಮುಖ ರೂವಾರಿ ಉಪವಿಭಾಗಾಧಿಕಾರಿ ಡಾ.ಉದಯಕುಮಾರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಬಗರ್‌ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ, ಎ.ಪಿ.ಎಂ.ಸಿ. ಅಧ್ಯಕ್ಷ ಕೆ.ಹೊಳಿಯಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಟಿ. ಸ್ವಾಮಿ, ತಹಸೀಲ್ದಾರ್ ಸಾಜಿದ್ ಅಹಮದ್ ಮುಲ್ಲಾ, ತಾಪಂ ಸದಸ್ಯೆ ಶ್ವೇತಾ ಉಮೇಶ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement