ಸಮಾರೋಪ
ಶಿವಮೊಗ್ಗ: ನಗರದ ರವೀಂದ್ರನಗರ ಶ್ರೀ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ಶ್ರೀಗುರುಗುಹ ವಾಗ್ಗೇಯ ಪ್ರತಿಷ್ಠಾನ ಟ್ರಸ್ಟ್ ಹಾಗೂ ಶ್ರೀಗುರುಗುಹ ಸಂಗೀತ ಮಹಾವಿದ್ಯಾನಿಲಯ ಡಿ.17 ರಂದು ಸಂಜೆ 5.45 ಗಂಟೆಗೆ ಮಾರ್ಗಶಿರ ವೀಣಾ ಮಹೋತ್ಸವ ದಶಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಏರ್ಪಡಿಸಿದೆ. ಡಿ.17 ರಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬಕ್ಕೇರಿ, ದೊರೆಸ್ವಾಮಿ ಅಯ್ಯಂಗಾರ್ ಟ್ರಸ್ಟ್ ಅಧ್ಯಕ್ಷ ಎಂ.ಭರದ್ವಾಜ್ ಭಾಗವಹಿಸುವರು.
ವಿದ್ಯಾರ್ಥಿ ಸಾವು
ತೀರ್ಥಹಳ್ಳಿ: ಪ್ರವಾಸಕ್ಕೆ ಬಂದ ಮೆಡಿಕಲ್ ವಿದ್ಯಾರ್ಥಿ ನಂದನ್(19) ತೀರ್ಥಹಳ್ಳಿ ತಾಲೂಕಿನ ಸಿಬ್ಬಲ ಗುಡ್ಡೆಯ ತುಂಗಾನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಶಿವಮೊಗ್ಗ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಶನಿವಾರ ಪ್ರವಾಸಕ್ಕೆಂದು ತೀರ್ಥಹಳ್ಳಿಯ ಸಿಬ್ಬಲಗುಡ್ಡೆಗೆ ಬಂದಿದ್ದರು. ಸಿಬ್ಬಲಗುಡ್ಡೆಯ ತುಂಗಾನದಿಯಲ್ಲಿ ಅಪರೂಪದ ಮೀನುಗಳನ್ನು ನೋಡತ್ತಿದ್ದಾಗ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ. ಸೋಮವಾರ ಮಧ್ಯಾಹ್ನ ನಂದನ್ ಮೃತದೇಹ ಸಿಕ್ಕಿದ್ದು, ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.