ಇದೇನಾ 'ಸಂಸ್ಕೃತಿ'?
ಆತುರ ಬೇಡ
ಈಗಲೇ ಹಣ ಕೊಡಿ ಎನ್ನುವುದು ಸರಿಯಲ್ಲ. ಹಾಲಿ ಆರ್ಥಿಕ ವರ್ಷದಲ್ಲಿ ಜಿಲ್ಲಾ, ತಾಲೂಕು, ಅಖಿಲ ಭಾರತ ಸಮ್ಮೇಳನದ ಜವಾಬ್ದಾರಿಗಳಿವೆ. ಇದು ಮೊದಲು ಆಗಬೇಕು. ಶತಮಾನೋತ್ಸವ ವೇಳೆ ನಾಡಿನಾದ್ಯಂತ ಏನು ಚಟುವಟಿಕೆ ಮಾಡಲು ಯೋಜನೆ ಸರ್ಕಾರಕ್ಕೆ ಪ್ರಸ್ತಾವನೆ ಕೊಟ್ಟಿದ್ದೀವಿ. ಅದಕ್ಕಿನ್ನೂ ಸಮಯ ಇದೆ. ನಾವೆಲ್ಲಾ ಯೋಜನೆಗಳನ್ನ, ಯೋಚನೆಗಳನ್ನ ಮಾಡಿಕೊಂಡು ಸಿದ್ಧವಾಗಿರುವ ಸಂದರ್ಭದಲ್ಲಿ ಹಣ ಬರುತ್ತೆ. ಆತುರಪಡುವ ಅಗತ್ಯ ಇಲ್ಲ.
- ಡಿ. ಮಂಜುನಾಥ್, ಅಧ್ಯಕ್ಷರು, ಜಿಲ್ಲಾ ಕಸಾಪ,
ವಿಪರ್ಯಾಸ
ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷ ಸಂದಿದ್ದರೂ ಸರ್ಕಾರ ಆರ್ಥಿಕ ನೆರವು ನೀಡಲು ಮುಂದಾಗದಿರುವುದು ವಿಪರ್ಯಾಸ. 2 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಬೃಹತ್ ಪರಿಷತ್ ಇದಾಗಿದೆ. ಕನ್ನಡ ನಾಡು, ನುಡಿ, ಭಾಷೆಯನ್ನು ಉಳಿಸಲು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿರುವ ಸಂಸ್ಥೆ.
ಕೊಗಲೂರು ತಿಪ್ಪೇಸ್ವಾಮಿ, ಕಸಾಪ ಅಧ್ಯಕ್ಷ, ಭದ್ರಾವತಿ