ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕನ್ನಡ ಅಲಕ್ಷ್ಯ ಸಲ್ಲ: ಡಾ. ನಿಸಾರ್ ಅಹ್ಮದ್

Lingaraj Badiger
Updated On : 18 Dec 2013, 10:53 am

ತೀರ್ಥಹಳ್ಳಿ: ಕನ್ನಡ ಅಲಕ್ಷ್ಯ ಮಾಡುವುದು ಸರಿಯಲ್ಲ. ಇಂಗ್ಲಿಷ್ ಬಿಟ್ಟರೆ ಗತಿಯಿಲ್ಲ ಎನ್ನುವ ಭಾವನೆ ಸೃಷ್ಟಿಯಾಗಿರುವ ಸನ್ನಿವೇಶ ಒಳ್ಳೆಯದಲ್ಲ. ಇದನ್ನು ತೊಡೆದು ಹಾಕುವ ಪ್ರಯತ್ನ ಸರ್ಕಾರದಿಂದ ಆಗಬೇಕು ಎಂದು ನಾಡೋಜ ಕವಿ ಡಾ. ನಿಸಾರ್ ಅಹ್ಮದ್ ಅಭಿಪ್ರಾಯಪಟ್ಟರು. ಸ್ವರ ಸನ್ನಿಧಿ ಟ್ರಸ್ಟ್, ಕವಿಶೈಲ ಟ್ರಸ್ಟ್, ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ಸರ್ಕಾರ ಕನ್ನಡ ಕಡೆಗಣಿಸಬಾರದು ಎಂದು ಹೇಳಿದರು.  
 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾಡೋಜ ನಾ. ಡಿಸೋಜ ಅವರನ್ನು ಕುವೆಂಪು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ನಾ. ಡಿಸೋಜ, ಕನ್ನಡ ನಮ್ಮ ಶ್ರೀಮಂತ ಭಾಷೆ. ಅದನ್ನು ಉಳಿಸಿ, ಬೆಳೆಸುವುದರಲ್ಲಿ ನಮ್ಮ ಶ್ರೀಮಂತಿಕೆ ಅಡಗಿದೆ ಎಂದು ಹೇಳಿದರು.    
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅಧ್ಯಕ್ಷತೆ ವಹಿಸಿದ್ದರು. ಸ್ವರ ಸನ್ನಿಧಿ ಟ್ರಸ್ಟಿನ ಅಧ್ಯಕ್ಷೆ, ಗಾಯಕಿ ಡಾ. ಶಮಿತಾ ಮಲ್ನಾಡ್, ಕುವೆಂಪು ಪ್ರತಿಷ್ಠಾನದ ಕಡಿದಾಳ್ ಪ್ರಕಾಶ್, ರೋಟರಿ ಅಧ್ಯಕ್ಷ ಗಿರೀಶ್, ಕವಿಶೈಲ ಟ್ರಸ್ಟಿನ ವಿಜಯ್ ಬಿಳಿಗಿರಿ, ಜೆಡಿಎಸ್ ಘಟಕದ ಅಧ್ಯಕ್ಷ ಅರ್. ಮದನ್ ಇದ್ದರು. ಡಾ. ನಿಸಾರ್ ಅಹಮದ್ ಅವರ ಗೀತೆಗಳನ್ನು ಡಾ. ಶಮಿತಾ ಮಲ್ನಾಡ್ ಸಂಗಡಿಗರು ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement